ಬ್ರಹ್ಮಾವರ: ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ದೇವಸ್ಥಾನದ ವತಿಯಿಂದ ಶ್ರೀ ಚಂಡಿಕಾಯಾಗ ಸೋಮವಾರ ಜರುಗಿತು. ಬಳಿಕ ದೇವಸ್ಥಾನದ ಕೂಡುವಳಿಕೆಯ 141 ಗ್ರಾಮ ಮೋಕ್ತೇಸರರ ಸಭೆಯಲ್ಲಿ ಆಡಳಿತ ಮೋಕ್ತೇಸರ್ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ ಮಾತನಾಡಿ ಕೇವಲ ಉಡುಪಿ ಜಿಲ್ಲೆಯಲ್ಲಿ 40 ಸಾವಿರ ಮನೆ 2 ಲಕ್ಷ ವಿಶ್ವಕರ್ಮರು ದ.ಕ. ಜಿಲ್ಲೆಯಲ್ಲಿ 2 ಲಕ್ಷ ಮನೆ 40 ಲಕ್ಷ ವಿಶ್ವಕರ್ಮರು ಇದ್ದರೂ ಸರಕಾರದ ಜನಗಣತಿಯ ಜೊತೆ ಕರಾವಳಿಯ 21 ವಿಶ್ವಕರ್ಮರ ದೇವಸ್ಥಾನದ ಕೂಡುವಳಿಕೆಯವರ ಮನೆ ಉದ್ಯೋಗ ಶಿಕ್ಷಣದ ಮಾಹಿತಿಯ ಗಣತಿ ಮಾಡಬೇಕಾಗಿದೆ ಎಂದರು.
ಮೋಕ್ತೇಸರ ಪ್ರವೀಣ್ ಆಚಾರ್ಯ ರಂಗನಕೆರೆ ದೇವಸ್ಥಾನದ ನಿಯಮಾವಳಿ ಮತ್ತು ನಿರ್ಣಯ, ನಡಾವಳಿಗಳನ್ನು ಸಭೆಯ ಮುಂದಿರಿಸಿ ಗ್ರಾಮ ಮೊಕ್ತೇಸರರ ಅನುಮೋದನೆ ಪಡೆದರು. ತೀರ್ಥಹಳ್ಳಿ ಸಮೀಪದ ಅರಗಕ್ಕೆ ಹೊಸ ಕೂಡುವಳಿಕೆ ಮೊಕ್ತೇಸರ ಆಯ್ಕೆ ನಡೆಯಿತು. ಗ್ರಾಮ ಮೋಕ್ತೇಸರರಿಗೆ ದೀಪೋತ್ಸವದ ಆಮಂತ್ರಣ ವಿತರಿಸಲಾಯಿತು. ನಾನಾ ಗ್ರಾಮ ಮೋಕ್ತೆಸರರು ಸಲಹೆ, ಸೂಚನೆ, ಅಭಿಪ್ರಾಯ ವ್ಯಕ್ತಪಡಿಸಿದರು. ದೇವಸ್ಥಾನದ ತಂತ್ರಿ ಲಕ್ಷ್ಮೀ ಕಾಂತ ಶರ್ಮ, ಮೋಕ್ತೇಸರ ಮಣೂರು ಸುಬ್ರಾಯ ಆಚಾರ್ಯ ಮತ್ತು ಆಡಳಿಯ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
PublicNext
02/10/2025 09:20 am
LOADING...