ಮುಲ್ಕಿ: ಬೆಂಗಳೂರಿನ ಜಿಕೆವಿಕೆ ಆಯೋಜಿಸಿದ್ದ ರಾಜ್ಯ ಮಟ್ಟದ ಕೃಷಿ ಮೇಳದ ಜೇನು ವಿಭಾಗದ ಪ್ರದರ್ಶನದಲ್ಲಿ, ಕಿನ್ನಿಗೋಳಿಯ ಯುವ ಜೇನುಕೃಷಿಕ ಪ್ರಜ್ವಲ್ ಎಂ ಅವರು ಜೇನು ಮೇಣದಿಂದ ತಯಾರಿಸಿದ ಚೆಸ್ ಬೋರ್ಡ್, ಭಾರತದಲ್ಲಿ ಮೊದಲ ಬಾರಿಗೆ "ಇಂಡಿಯಾ ಬುಕ್ ಆಫ್ ರೆಕಾರ್ಡ್" ಪುಟ ಸೇರುವ ಮೂಲಕ ಇತಿಹಾಸ ಸೃಷ್ಟಿಸಿದೆ. ಜೇನುಮೇಣದಿಂದ ಚೆಸ್ ಬೋರ್ಡ್ ತಯಾರಿಸಿದ ಕೀರ್ತಿ ಪ್ರಜ್ವಲ್ ಎಂ ಅವರಿಗೆ ಸಲ್ಲುತ್ತದೆ.
ಯುವ ಜೇನುಕೃಷಿಕನ ಸಾಧನೆಗಳು
ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯ ತಾಳಿಪಾಡಿ ನಿವಾಸಿಯಾಗಿರುವ ಪ್ರಜ್ವಲ್ ಎಂ, ಕಳೆದ ಆರು ವರ್ಷಗಳಿಂದ ಜೇನುಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಅವರು ಜೇನುಕೃಷಿಯಲ್ಲಿ 25ಕ್ಕೂ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಸಂಶೋಧನೆ ನಡೆಸಿದ್ದಾರೆ. ತಮ್ಮ ಕಿರಿಯ ವಯಸ್ಸಿನಲ್ಲೇ ಶಾಲಾ ಮಕ್ಕಳಿಗೆ ಜೇನುಕೃಷಿಯ ಬಗ್ಗೆ ಶಿಕ್ಷಣ ನೀಡುತ್ತಾ, ತರಬೇತಿಯನ್ನೂ ಆರಂಭಿಸಿದ್ದಾರೆ. ಅವರ ಈ ಸಾಧನೆಗಳನ್ನು ಪರಿಗಣಿಸಿ, ಅಕ್ಟೋಬರ್ 30, 2025 ರಂದು ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯು ಅವರಿಗೆ ರಾಜ್ಯ ಮಟ್ಟದ 'ಅತ್ಯುತ್ತಮ ಸಾಧಕ' ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಪ್ರಶಂಸನೀಯ ಪ್ರಯತ್ನ
ಇದೀಗ ಮತ್ತೊಮ್ಮೆ 'ಬುಕ್ ಆಫ್ ರೆಕಾರ್ಡ್' ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಪ್ರಜ್ವಲ್, ತಮ್ಮ ಎಳೆಯ ಪ್ರಾಯದಲ್ಲಿಯೇ ಜೇನುಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಶ್ಲಾಘನೀಯ.
Kshetra Samachara
15/12/2025 11:28 am
LOADING...