ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಕಾಪು ಯೋಜನಾ ಪ್ರಾಧಿಕಾರದಲ್ಲಿ ಕಡತಗಳ ಬಾಕಿ ,ಕಡತ ವಿಲೇವಾರಿಗೆ ವಿಳಂಬ ,ಭ್ರಷ್ಟಾಚಾರದ ಆರೋಪ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ಪರಿಶೀಲನೆ

ಕಾಪು: ಕಾಪು ಯೋಜನಾ ಪ್ರಾಧಿಕಾರದಲ್ಲಿ ಹಳೆ ಕಡತಗಳ ಬಾಕಿ ,ಕಡತ ವಿಲೇವಾರಿಗೆ ವಿಳಂಬ ಮತ್ತು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ

ಲೋಕಾಯುಕ್ತ ಡಿವೈಸ್‌ಪಿ ಹಾಲಮೂರ್ತಿ ರಾವ್ ಇನ್ಸ್‌ಪೆಕ್ಟರ್ ಗಳಾದ ಮಂಜುನಾಥ್ ಮತ್ತು ರಾಜೇಂದ್ರ ನಾಯಕ್ ಹಾಗೂ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದು ಯೋಜನಾ ಪ್ರಾಧಿಕಾರದಲ್ಲಿರುವ ಕಡತಗಳನ್ನು ಪರಿಶೀಲಿಸಿದ್ದಾರೆ

ಸುಮಾರು 350 ಕ್ಕೂ ಅಧಿಕ ಕಡತಗಳನ್ನು ಪರಿಶೀಲಿಸಿದ್ದು ಇದರಲ್ಲಿ ವಿಲೇವಾರಿಯಾಗದ 86 ಕಡತಗಳನ್ನು ಪತ್ತೆ ಹಚ್ಚಿದ್ದಾರೆ. ಅತಿ ಶೀಘ್ರದಲ್ಲಿ ವಿಲೇವಾರಿಗೊಳಿಸುವಂತೆ ಯೋಜನಾ ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.

ಕಡತ ವಿಲೇವಾರಿಯಾಗದಿರುವ ಬಗ್ಗೆ ಸಾರ್ವಜನಿಕರಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತರಿಂದ ಶೋಧನಾ ವಾರಂಟ್ ಪಡೆದು ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಶೋಧನೆ ನಡೆಸಲಾಗಿದ್ದು ಇಲ್ಲಿ ಪತ್ತೆಯಾಗಿರುವ ಕಡತಗಳ ಬಗ್ಗೆ ಲೋಕಾಯುಕ್ತಕ್ಕೆ ವರದಿ ಸಲ್ಲಿಸುವುದಾಗಿ ಲೋಕಾಯುಕ್ತ ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Edited By : Vinayak Patil
PublicNext

PublicNext

18/12/2025 09:20 pm

Cinque Terre

7.85 K

Cinque Terre

0

ಸಂಬಂಧಿತ ಸುದ್ದಿ