ಮಂಗಳೂರು: ಮಹೇಶ್ ಶೆಟ್ಟಿ ತಿಮರೋಡಿಯವರನ್ನು ದ.ಕ ಜಿಲ್ಲೆಯಿಂದ ಮತ್ತೆ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶಿಸಿದ್ದಾರೆ.
ಮೊನ್ನೆಯಷ್ಟೇ ಸ್ಟೆಲ್ಲಾ ವರ್ಗೀಸ್ ಅವರು ತಿಮರೋಡಿಯವರಿಗೆ ಯಾಕೆ ಗಡೀಪಾರು ಮಾಡಬಾರದೆಂದು ಕಾರಣ ಕೇಳಿ ನೋಟಿಸ್ ನೀಡಿದ್ದರು. ಡಿ.7ರಂದು ಸಹಾಯಕ ಆಯುಕ್ತರ ಗಡೀಪಾರು ನೋಟಿಸ್‌ಗೆ ಮಹೇಶ್ ಶೆಟ್ಟಿ ತಿಮರೋಡಿಯವರು ಆಕ್ಷೇಪಣೆ ಸಲ್ಲಿಸಿದ್ದರು.
ವಾದ-ಪ್ರತಿವಾದ ಆಲಿಸಿ ತಿಮರೋಡಿ ವಿರುದ್ಧ ಮತ್ತೆ ಗಡೀಪಾರು ಮಾಡಿ ಎಸಿ ಆದೇಶಿಸಿದ್ದಾರೆ. ದ.ಕ ಜಿಲ್ಲಾ ಪೊಲೀಸರು ತಿಮರೋಡಿ ಗಡೀಪಾರಿಗೆ ಸೂಕ್ತ ಕಾರಣ ನೀಡಿ ವರದಿ ಸಲ್ಲಿಕೆ ಮಾಡಿದ್ದರು. ಪೊಲೀಸ್ ವರದಿ ಆಧಾರದಲ್ಲಿ ತಿಮರೋಡಿಗೆ ಮತ್ತೆ ಗಡೀಪಾರು ಆದೇಶಿಸಿದ್ದಾರೆ. ತಿಮರೋಡಿ ವಿರುದ್ಧದ ಈ ಹಿಂದಿನ ಕೇಸ್‌ಗಳ ಜೊತೆಗೆ ಹಾಲಿ ಕೆಲವು ಕೇಸುಗಳನ್ನು ಸೇರಿಸಿ ಗಡೀಪಾರು ಆದೇಶಿಸಿದ್ದಾರೆ.
ಈ ಹಿಂದೆ 18-09-2025 ರಿಂದ 17-09-2026 ರವರೆಗೆ ಒಂದು ವರ್ಷ ಅವಧಿಗೆ ಗಡೀಪಾರು ಮಾಡಿದ್ದರು. ಆದರೆ ಗಡಿಪಾರು ಆದೇಶ ರದ್ದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ತಿಮರೋಡಿಯವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಗಡಿಪಾರು ಆದೇಶ ರದ್ದು ಮಾಡಿತ್ತು. ಕಾನೂನು ಪ್ರಕಾರ ಹೊಸ ಪ್ರಕ್ರಿಯೆ ನಡೆಸಿ ಆದೇಶ ಮಾಡಲು ಹೈಕೋರ್ಟ್ ಸೂಚಿಸಿತ್ತು. ಅದರಂತೆ ಕೆಲ ಕಾನೂನಾತ್ಮಕ ಪ್ರಕ್ರಿಯೆ ಅಡಿಯಲ್ಲಿ ಗಡೀಪಾರು ಪ್ರಕ್ರಿಯೆಗೆ ಪುತ್ತೂರು ಎಸಿಯವರು ಕಾರ್ಯ ಆರಂಭಿಸಿದ್ದರು. ಅದರಂತೆ ಎರಡನೇ ಬಾರಿಗೆ ಮತ್ತೆ ಮಹೇಶ್ ಶೆಟ್ಟಿ ತಿಮರೋಡಿ ಜಿಲ್ಲೆಯಿಂದ ಗಡೀಪಾರು ಮಾಡಿ ಆದೇಶಿಸಿದ್ದಾರೆ.
PublicNext
18/12/2025 02:11 pm
LOADING...