ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ವಸತಿ ಸಮುಚ್ಚಯಗಳ ಮಾಲಕರ ಸಂಘಕ್ಕೆ ಗ್ರಾಹಕರ ನ್ಯಾಯಾಲಯ ದಂಡ

ಮಂಗಳೂರು: ನಗರದ ಲೈಟ್‌ಹೌಸ್‌ನ ವಸತಿ

ಸಮುಚ್ಚಯವೊಂದರ ಮಾಲಕರ ಸಂಘವು ವಸತಿ ಸಮುಚ್ಚಯ ಕಟ್ಟಡದ ನಿಯಮಾವಳಿಗಳನ್ನು ಪಾಲಿಸದ ಕಾರಣ ಮತ್ತು ವಸತಿ ಸಮುಚ್ಚಯ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವ ಹಿನ್ನೆಲೆಯಲ್ಲಿಮಂಗಳೂರಿನ ಜಿಲ್ಲಾ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ.

ಕಟ್ಟಡದ ನಿರ್ವಹಣೆಯನ್ನುಸರಿಯಾದ ರೀತಿಯಲ್ಲಿಮಾಡದಿರುವುದು, ಮಾಸಿಕ ನಿರ್ವಹಣೆ ವೆಚ್ಚದ ರಶೀದಿಯನ್ನು ಕೊಡದಿರುವುದು, ವಾರ್ಷಿಕ ಮಹಾಸಭೆಯಲ್ಲಿ ಸರಿಯಾದ ಲೆಕ್ಕಪತ್ರ ತೋರಿಸದೆ ಇರುವುದು, ಸಂಘದ ಹಣದ ದುರುಪಯೋಗ ಮಾಡಿರುವುದು, ಅವಧಿಗೆ ಸರಿಯಾಗಿ ಸಂಘದ ಸಭೆಗಳನ್ನು ಮಾಡದೇ ಇರುವ ಬಗ್ಗೆ ಕಟ್ಟಡದ ಮಾಲಕರು/ಸದಸ್ಯ ಪಿ. ಬಾಲಚಂದ್ರನ್ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಪ್ರಕರಣದ ತನಿಖೆ ನಡೆಸಿದ ಮಂಗಳೂರು ಜಿಲ್ಲಾ ಗ್ರಾಹಕರ ನ್ಯಾಯಾಧೀಶರಾದ ಸೋಮಶೇಖರಪ್ಪ ಹಂಡಿಗೊಳು ಅವರು ಅರ್ಜಿದಾರರ ಅರ್ಜಿಯನ್ನು ಎತ್ತಿ ಹಿಡಿದು ವಸತಿ ಸಮುಚ್ಚಯಗಳ ಮಾಲಕರ ಸಂಘವು 10,000 ರೂ. ಪರಿಹಾರವನ್ನು ಅರ್ಜಿದಾರರಿಗೆ ಕೊಡಬೇಕು ಹಾಗೂ 5,000 ರೂ.ಗಳನ್ನು ಪ್ರಕರಣದ ಖರ್ಚಾಗಿ ನೀಡಬೇಕು ಮತ್ತು ಕಟ್ಟಡದ ನಿರ್ವಹಣೆಯನ್ನು ಕರ್ನಾಟಕ ವಸತಿ ಸಮುಚ್ಚಯಗಳ ಮಾಲಕತ್ವಕಾಯಿದೆ ಮತ್ತು ನಿಯಮಗಳಿಗನುಗುಣವಾಗಿ ನಡೆಸಿಕೊಂಡು ಬರಬೇಕು, ತಪ್ಪಿದಲ್ಲಿ ದಿನಕ್ಕೆ 500 ರೂ. ದಂಡ ಕೊಡಬೇಕು ಆದೇಶ ಮಾಡಿದ್ದಾರೆ.

ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ನ್ಯಾಯವಾದಿ ಕೆ. ದಯಾನಂದ ರೈ ವಾದಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

18/12/2025 09:50 pm

Cinque Terre

406

Cinque Terre

0

ಸಂಬಂಧಿತ ಸುದ್ದಿ