ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾರ್ಕ್ ಶೂಟಿಂಗ್ ಸೆಟ್ ಅಲ್ಲಿ ಏನು ಆಯಿತು? ರಘು ರಾಮನಕೊಪ್ಪ ಹೇಳಿದ್ರು ಮಾರ್ಕ್ ಸೆಟ್ ಸೀಕ್ರೆಟ್..!

ಬೆಂಗಳೂರು : ಮಾರ್ಕ್ ಸಿನಿಮಾ ಬಿಡುಗಡೆಗೆ ಸಂಪೂರ್ಣವಾಗಿ ಸಜ್ಜಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಘು ರಾಮನಕೊಪ್ಪ ಅವರು, ತಮ್ಮ ಸಿನಿಮಾ ಅನುಭವಗಳನ್ನು ಪಬ್ಲಿಕ್ ನೆಕ್ಸ್ಟ್ ಜೊತೆ ಹಂಚಿಕೊಂಡಿದ್ದಾರೆ.

ಸುಮಾರು 40 ದಿನಗಳ ಶೂಟಿಂಗ್ ನಡೆಯಿತು. ಆದರೆ ಆ ಸಂಪೂರ್ಣ ಅವಧಿಯಲ್ಲಿ ಒಂದು ದಿನವೂ ಅವರಿಗೆ ನಿದ್ರೆ ಸಿಗಲಿಲ್ಲವೆಂದು ಹೇಳುತ್ತಾರೆ. ಹಾಗಾದರೆ ಶೂಟಿಂಗ್ ಸೆಟ್‌ನಲ್ಲಿ ಅಷ್ಟು ವಿಶೇಷವಾಗಿ ಏನಾಯಿತು? ಯಾವ ಅನುಭವಗಳು ಅವರಿಗೆ ಅಚ್ಚರಿ ತಂದವು?

ಇನ್ನೂ, ಕಿಚ್ಚ ಸುದೀಪ್ ಅವರ ಜೊತೆಗೆ ಕಳೆದ ದಿನಗಳ ನೆನಪುಗಳನ್ನು ರಘು ರಾಮನಕೊಪ್ಪ ಅವರು ಮನಮುಟ್ಟುವಂತೆ ನಮ್ಮ ಮುಂದೆ ಇಟ್ಟಿದ್ದಾರೆ. ಅವರ ಜೊತೆಗಿನ ಕೆಲಸ, ಸೆಟ್‌ನ ವಾತಾವರಣ ಹಾಗೂ ಈ ಸಿನಿಮಾದ ವಿಶೇಷತೆಗಳ ಬಗ್ಗೆ ಅವರು ಬಹಳ ಕುತೂಹಲಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಮಾರ್ಕ್ ಸಿನಿಮಾ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ಮಾಹಿತಿಗಾಗಿ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

Edited By : Suman K
PublicNext

PublicNext

16/12/2025 05:34 pm

Cinque Terre

6.76 K

Cinque Terre

0