ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ನನ್ನ ಮೊಟ್ಟೆ ಎಲ್ಲಿ ಹೋಯಿತು?ಗಿಲ್ಲಿ ತಟ್ಟೆಯಲ್ಲಿನ ಮೊಟ್ಟೆ ಕದ್ದ ರಜತ್‌...

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಆಟ, ಟಾಸ್ಕ್‌ಗಳಷ್ಟೇ ಊಟೋಪಚಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಈ ಬಾರಿ ಮನೆಯ ಸದಸ್ಯರೊಬ್ಬರ ತಟ್ಟೆಯಿಂದಲೇ ಮೊಟ್ಟೆ ಕಳ್ಳತನವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಗಿಲ್ಲಿ ತಟ್ಟೆಯಲ್ಲಿದ್ದ ಅರ್ಧ ಮೊಟ್ಟೆಯನ್ನು ರಜತ್ ಕಿಶನ್ ಕದ್ದು ತಿಂದಿದ್ದು, ಈ ಹಾಸ್ಯಮಯ 'ಮೊಟ್ಟೆ ಕಳ್ಳತನ' ಪ್ರಕರಣ ದೊಡ್ಮನೆಯಲ್ಲಿ ಸದ್ದು ಮಾಡುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಮಾಂಸಾಹಾರ ಪ್ರತಿದಿನವೂ ಸಿಗುವುದಿಲ್ಲ. ಮೊಟ್ಟೆಗಳೂ ಸಹ ನಿಯಮಿತವಾಗಿ ಲಭ್ಯವಿರುವುದಿಲ್ಲ. ಹೀಗಿರುವಾಗ, ರಘು ಅವರು ಚಪಾತಿ ಜೊತೆಗೆ ಎಲ್ಲ ಸದಸ್ಯರಿಗೆ ತಲಾ ಒಂದೊಂದು ಮೊಟ್ಟೆಯನ್ನು ಹಂಚಿದ್ದರು.

ಗಿಲ್ಲಿ ಮತ್ತು ರಜತ್ ಕಿಶನ್ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ, ಗಿಲ್ಲಿಗೆ ಅರಿವಿಲ್ಲದಂತೆ ರಜತ್ ಕಿಶನ್ ಅವರ ತಟ್ಟೆಯಲ್ಲಿದ್ದ ಅರ್ಧ ಮೊಟ್ಟೆಯನ್ನು ಚಾಣಾಕ್ಷತನದಿಂದ ಎಗರಿಸಿದರು. ತನ್ನ ಮೊಟ್ಟೆ ಕಾಣೆಯಾಗಿರುವುದನ್ನು ಗಮನಿಸಿದ ಗಿಲ್ಲಿ, ಪಕ್ಕದಲ್ಲೇ ಇದ್ದ ರಜತ್ ಅವರನ್ನು "ನನ್ನ ಮೊಟ್ಟೆ ಎಲ್ಲಿ ಹೋಯಿತು?" ಎಂದು ಕೇಳಿದರು. ಆದರೆ, ಕದ್ದ ಮೊಟ್ಟೆಯನ್ನು ಸವಿಯುತ್ತಾ ರಜತ್ ಕಿಶನ್ ಮಂದಹಾಸ ಬೀರುತ್ತಾ ಸುಮ್ಮನೆ ಕುಳಿತಿದ್ದರು. ಗಿಲ್ಲಿಗೆ ಮೊಟ್ಟೆ ಕಳ್ಳತನದ ಬಗ್ಗೆ ಕೊಂಚವೂ ಸುಳಿವಿಲ್ಲ.

ತನ್ನ ತಟ್ಟೆಯಲ್ಲಿದ್ದ ಮೊಟ್ಟೆ ಕಾಣೆಯಾಗಿದ್ದಕ್ಕೆ ಗಿಲ್ಲಿ, "ನನ್ನ ಮೊಟ್ಟೆ ಎಲ್ಲಿ ಹೋಯಿತು? ರಘು, ನೀವು ನನಗೆ ಪೂರ್ತಿ ಮೊಟ್ಟೆ ಕೊಟ್ಟೇ ಇಲ್ಲ" ಎಂದು ರಘು ಬಳಿ ದೂರು ಸಲ್ಲಿಸಿದರು. ಇದಕ್ಕೆ ರಘು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು. ಆದರೆ, ಇದು ಪ್ರಸಾರವಾದ ಪ್ರೋಮೋದಲ್ಲಿ ಕಂಡ ಒಂದು ಸಣ್ಣ ತುಣುಕು ಮಾತ್ರ. ಇಡೀ ಸಂಚಿಕೆಯಲ್ಲಿ ಈ ಘಟನೆಯು ಬೇರೆ ರೀತಿಯ ತಿರುವು ಪಡೆದಿರಬಹುದು ಎಂದು ನಿರೀಕ್ಷಿಸಲಾಗಿದೆ.

Edited By : Nirmala Aralikatti
PublicNext

PublicNext

16/12/2025 08:56 pm

Cinque Terre

19.98 K

Cinque Terre

0