ಧಾರವಾಡ : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಶಂಕೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಳಗಾವಿ ಕೃಷಿ ಇಲಾಖೆಯ ಜಾಗೃತ ಕೋಶದ ಉಪನಿರ್ದೇಶಕ ರಾಜಶೇಖರ ಬಿಜಾಪುರ ಅವರಿಗೆ ಸೇರಿದ 6 ಕಡೆಗಳಲ್ಲಿ ಮಂಗಳವಾರ ದಾಳಿ ನಡೆಸಿದೆ.
ಧಾರವಾಡದ ಸಿಲ್ವರ್ ಆರ್ಚರ್ಡ್, ರಾಣಿ ಚೆನ್ನಮ್ಮನಗರದಲ್ಲಿರುವ ರಾಜಶೇಖರ ಬಿಜಾಪುರ ಅವರ ಮನೆ, ಚಿತ್ರದುರ್ಗ, ಶಿಗ್ಗಾಂವಿ ಸೇರಿ ಏಕಕಾಲಕ್ಕೆ 6 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ 3 ನಿವೇಶನಗಳು, 3 ಮನೆಗಳು, 6 ಎಕರೆ 30 ಗುಂಟೆ ಜಮೀನು ಸೇರಿ 5,34,25,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 80 ಸಾವಿರ ನಗದು, 18,19,000 ರೂಪಾಯಿ ಮೌಲ್ಯದ ಆಭರಣ, 38,80,000 ರೂಪಾಯಿ ಮೌಲ್ಯದ ವಾಹನಗಳು, 15 ಲಕ್ಷ ರೂಪಾಯಿ ಮೌಲ್ಯದ ಇತರೆ ವಸ್ತುಗಳು ಸೇರಿ 72,79,530 ರೂಪಾಯಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಎಸ್.ಟಿ. ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸದ್ಯ ಇನ್ನೂ ತನಿಖೆ ಮುಂದುವರಿದಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/12/2025 10:07 pm
LOADING...