ಧಾರವಾಡ: ಬೆಳಗಾವಿ ಅಧಿವೇಶನದ ವೇಳೆ ಶಾಸಕರಿಗೆ ಸರ್ಕಾರ ಭತ್ಯೆ ನೀಡಿದ ಮೇಲೂ ಅವರಿಗೆ ಊಟದ ವ್ಯವಸ್ಥೆ ಏಕೆ ಮಾಡಲಾಗುತ್ತಿದೆ? ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಲಿದೆ ಎಂದು ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ವಿಚಾರವಾಗಿ ಸೋಮವಾರ ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಆದೇಶ ಮಾಡಿದೆ.
ಸರ್ಕಾರ ಅಧಿವೇಶನದ ವೇಳೆ ಶಾಸಕರಿಗೆ ಭತ್ಯೆ ಕೊಡುತ್ತದೆ. ಹೀಗಿದ್ದರೂ ಅವರಿಗೆ ಉಚಿತ ಊಟ ನೀಡುತ್ತಿರುವುದು ಏಕೆ? 2006 ರಿಂದ ಇಲ್ಲಿಯವರೆಗೆ ನಡೆದ ಅಧಿವೇಶನದ ವೇಳೆ ಶಾಸಕರಿಗೆ ನೀಡಿದ ಭತ್ಯೆ ವಾಪಸ್ ಪಡೆಯಬೇಕು ಎಂದು ಭೀಮಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸದ್ಯ ಭೀಮಪ್ಪ ಪರ ವಕೀಲರು ಏಕಸದಸ್ಯ ಪೀಠದ ಎದುರು ತಮ್ಮ ವಾದ ಮಂಡಿಸಿದ್ದು, ಹೈಕೋರ್ಟ್, ಸರ್ಕಾರಕ್ಕೆ ಈ ಬಗ್ಗೆ ನೋಟಿಸ್ ಜಾರಿ ಮಾಡಲು ಆದೇಶ ಮಾಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/12/2025 06:29 pm
LOADING...