ಹುಬ್ಬಳ್ಳಿ: ಚೆನ್ನಾಗಿ ಓದಿ, ಗೌರ್ನಮೆಂಟ್ ನೌಕರಿ ಪಡೆದು ಇಡೀ ತನ್ನ ಕುಟುಂಬವನ್ನು ನೋಡಿಕೊಳ್ಳಬೇಕೆಂದು ಆಸೆ ಹೊತ್ತಿದ್ದ ಯುವತಿ, ಈಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಫೋಟೋದಲ್ಲಿ ಕಾಣುತ್ತಿರುವ ಪಲ್ಲವಿ ಎಂಬ ವಿದ್ಯಾರ್ಥಿನಿ ರೈಲ್ವೆಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ, ಆರೋಗ್ಯ ಸಮಸ್ಯೆ ಇರುವುದಕ್ಕೆ ಮನನೊಂದು ಧಾರವಾಡದ ಕ್ಯಾರಕೊಪ್ಪ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಳು, ಅದು ಉದ್ಯೋಗ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು, ಆದರೆ ಅಸಲಿ ಎಂದರೆ ಪಲ್ಲವಿಗೆ ಆರೋಗ್ಯ ಸಮಸ್ಯೆ ಇತ್ತಂತೆ, ಅದಕ್ಕಾಗಿ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹುಬ್ಬಳ್ಳಿ ಕಿಮ್ಸ್ ಗೆ ಆಗಮಿಸಿದ ಕುಟುಂಬಸ್ಥರು.
*ಮಗಳನ್ನು ನೆನೆದು ತಂದೆ ಭಾವುಕರಾದರು. ಕಣ್ಣೀರು ಹಾಕುತ್ತಲೇ ಮಗಳ ಶವ ನೋಡಲು ಹೋದ ಕುಟುಂಬಸ್ಥರು.
ಮೂಲತಃ ಬಳ್ಳಾರಿ ಜಿಲ್ಲೆಯ ಪಲ್ಲವಿ, ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು, ಪಲ್ಲವಿಗೆ ಆರೋಗ್ಯ ಸಮಸ್ಯೆ ಮತ್ತು ಕೌಟುಂಬಿಕ ಸಮಸ್ಯೆ ಇದ್ದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂತೆ, ಈ ರೀತಿ ಎರಡು ಡೆತ್ ನೋಟ್ ಬರೆದಿಟ್ಟು ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದಾರೆ.
ವಿದ್ಯಾರ್ಥಿನಿ ಪಲ್ಲವಿ ಸಾವು ಇಡೀ ವಿದ್ಯಾರ್ಥಿ ಸಮುದಾಯಕ್ಕೆ ನೋವುಂಟು ಮಾಡಿದೆ. ಚೆನ್ನಾಗಿ ಓದಿ ನೌಕರಿ ಪಡೆದು ತನ್ನ ಕುಟುಂಬ ಸಾಕಬೇಕಿದ್ದ ಪಲ್ಲವಿ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ರೀತಿ ಯಾವ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಎಲ್ಲರಲ್ಲೂ ಮನವಿ.
ಕ್ಯಾಮರಾ ಪರ್ಸನ್ ಗಜಾನನ ಹೂಗಾರ ಜೊತೆ ಈರಣ್ಣ ವಾಲಿಕಾರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/12/2025 06:10 pm
LOADING...