ಕುಂದಗೋಳ : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಸಿವು ನೀಗಿಸಬೇಕಿದ್ದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗಿದೆ ಎಂಬ ಆರೋಪಕ್ಕೆ ತಿಳಿದ ತಹಶೀಲ್ದಾರ್ ರಾಜು ಮಾವರಕರ ಡಿಸೆಂಬರ್ 12ರಂದು ಶಾಲೆಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದರು.
ಈ ವೇಳೆ ಅಂದಾಜು 50 ಕೆಜಿ ತೂಕದ 78 ಅಕ್ಕಿ ಮೂಟೆಗಳು ದಾಸ್ತಾನು ಕೊಠಡಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದವು. ಡಿಸೆಂಬರ್ 9ರಂದು ಕುಂದಗೋಳ ಪಟ್ಟಣದ ಕೆ.ಎಫ್.ಸಿ.ಎಸ್.ಸಿ ಗೋದಾಮಿನಿಂದ ಸರಬರಾಜು ಆದ ಅಕ್ಕಿ ಮೂಟೆಗಳು ಪೈಕಿ 78 ಅಕ್ಕಿ ಮೂಟೆಗಳು ಮೊರಾರ್ಜಿ ದೇಸಾಯಿ ವಸತಿ ಶಾಲೆ ದಾಸ್ತಾನು ಕೊಠಡಿಯಲ್ಲಿ ಇರಲೇ ಇಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ರಾಜು ಮಾವರಕರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವರದಿ ಒಪ್ಪಿಸಿದ್ದಾರೆ.
ಬೈಟ್.1 ರಾಜು ಮಾವರಕರ, ತಹಶೀಲ್ದಾರ್, ಕುಂದಗೋಳ
ಸದ್ಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಕ್ಕಿ ಮೂಟೆ ಅಕ್ರಮ ಆಯ್ತಾ ? ಅಕ್ಕಿ ಸಾಗಾಟದ ವಾಹನ ಕೆಟ್ಟಾಗ ಅಕ್ಕಿ ಎಲ್ಲಿತ್ತು ? ಪರ್ಯಾಯ ವಾಹನದ ಮೂಲಕ ಅಕ್ಕಿ ಏಕೆ ಹಾಸ್ಟೇಲ್ ತಲಪಲಿಲ್ಲ ? ಈ ಬಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಅವರೇ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಮ್ಮ ಕರ್ನಾಟಕ ಜನಪರ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
19/12/2025 10:49 am
LOADING...