ಹುಬ್ಬಳ್ಳಿ: ಮೊಬೈಲ್ ಬಿಟ್ಟು ಓದು ಎಂದು ಬೈದಿದಕ್ಕೆ ಬಾಲಕನೊಬ್ಬ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಹೌದು,,, ಕುಸುಗಲ್ ಗ್ರಾಮದ ಅರುಣ್ ಗೌಡ(16) ಮೃತ ಪಟ್ಟ ಬಾಲಕ. ಮನೆಯಲ್ಲಿ ಪೋಷಕರು ಮೊಬೈಲ್ ಬಿಟ್ಟು ಓದು ಸರಿಯಾಗಿ ಎಂದು ಹೇಳಿದ್ದಕ್ಕೆ ವಿಷ ಸೇವಿಸಿದ್ದಾನೆ. ಆಗ ಕುಟುಂಬಸ್ಥರು ಬಾಲಕನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅರುಣ್ ಗೌಡ ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾನೆ. ಇನ್ನೂ ಕುಟುಂಬಸ್ಥರು ಮಗನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಎಲ್ಲರೂ ಸ್ವಲ್ಪ ಯೋಚನೆಯನ್ನು ಮಾಡಿ ಎಂದು ಅರುಣ್ ಗೌಡ ಕುಟುಂಬಸ್ಥರು ತಿಳಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈರಣ್ಣ ವಾಲಿಕಾರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/12/2025 11:59 am
LOADING...