ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಹಳೇ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣದಲ್ಲಿ ಪಿಕ್ ಪಾಕೇಟ್ ಮಾಡುವವರು, ಸರಗಳ್ಳರ ಹಾವಳಿ ದಿನದಿಂದ ದಿನಕ್ಕೆ ಏರುತ್ತಿದೆ. ಈ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಬಸ್ ನಿಲ್ದಾಣಗಳು ಕಳ್ಳರ ವಾಸಸ್ಥಳವಾಗಿದೆ.
ಹೌದು,,, ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ದರೋಡೆ ಪ್ರಕರಣಗಳು ಒಂದುಕಡೆಯಾದರೆ, ಇಡಿ, ಪೊಲೀಸ್
ಅಧಿಕಾರಿಗಳ ನೆಪದಲ್ಲಿ ಉದ್ಯಮಿಗಳು, ಬಂಗಾರದ ವ್ಯಾಪಾರಸ್ಥರನ್ನು ಸುಲಿಗೆ ಮಾಡಿರುವ ಪ್ರಕರಣಗಳು ಕಣ್ಣ ಮುಂದಿವೆ. ಇದರ ಜೊತೆಗೆ ರಿಂಗ್ ರೋಡ್ ಮಾತ್ರ ಕಳ್ಳರ
ತಾಣವಾಗುತ್ತಿದೆ. ಲಾರಿ, ಬೈಕ್ ಸವಾರರನ್ನು ಅಡ್ಡಗಟ್ಟಿ ಹಣ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದಾರೆ.
ಇದು ನಗರದ ಹೊರಗಡೆ ನಡೆಯುವ ಪ್ರಕರಣಗಳಾದ್ರೆ, ವಾಣಿಜ್ಯನಗರಿಯ ಹೃದಯಭಾಗವಾದ ಹಳೇಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ, ಗೋಕುಲ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ
ಸೋಗಿನಲ್ಲಿ ಕಳ್ಳರು ಕರಾಮತ್ತು ತೋರಿಸುತ್ತಿದ್ದಾರೆ. ಹೀಗಾಗಿ ಬಸ್ ನಿಲ್ದಾಣಗಳಲ್ಲಿ
ಜನರ ಸುರಕ್ಷತೆ, ಆಭರಣಗಳಿಗೆ ಗ್ಯಾರಂಟಿ ಇಲ್ಲದಾಗಿದೆ.
ಇನ್ನು ಬಸ್ ನಿಲ್ದಾಣಗಳಲ್ಲಿ ಸಂಜೆ, ಬೆಳಗ್ಗೆ ಸಾರ್ವಜನಿಕರು ಹೆಚ್ಚು ಇರುವ ಸಂದರ್ಭ, ಹಬ್ಬ, ಹುಣ್ಣಿಮೆ, ಮದುವೆ ಸೀಸನ್‌ನಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು. ಅದರಲ್ಲೂ ಶಕ್ತಿ ಗ್ಯಾರಂಟಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ದಟ್ಟಣೆಯೇ ಹೆಚ್ಚು. ಈ ಸಮಯ, ಸಂದರ್ಭ, ಸನ್ನಿವೇಶ ಬಳಸಿಕೊಂಡು ಮಹಿಳಾ ಪ್ರಯಾಣಿಕರು ಹೆಚ್ಚು ಸೇರುವುದರಿಂದ
ಮಾಂಗಲ್ಯ ಸರ, ಬ್ಯಾಗ್ ಎಗರಿಸಿ ಪರಾರಿಯಾಗುತ್ತಿದ್ದಾರೆ. ಹೇಗೆ, ಯಾರು ಕದ್ದರು ಎಂಬುದೇ ಗೊತ್ತೇ ಆಗುವುದಿಲ್ಲ... ಹಣ, ಆಭರಣ ಕಳೆದುಕೊಂಡವರ ಗೋಳಾಟ ಹೇಳತೀರದಾಗಿದೆ. ಕಳ್ಳರಿಗಿಂತ ಕಳ್ಳಿಯರೇ ಇಂತಹ ಕೃತ್ಯ ಎಸಗುತ್ತಿದ್ದಾರೆ. ಒಳ್ಳೆಯ ಡ್ರೆಸ್ ಹಾಕಿರುತ್ತಾರೆ. ಅನುಮಾನ ಬರದಂತೆ ಎಚ್ಚರಿಕೆ ವಹಿಸುತ್ತಾರೆ. ಅವರು ಕಳ್ಳರು ಎಂದು ಅನಿಸುವುದೇ ಇಲ್ಲ. ತಮ್ಮ ಕೈ ಚಳಕ ಮುಗಿದ ಬಳಿಕ ಜಾಗ ಖಾಲಿ ಮಾಡುತ್ತಾರೆ. ಆ ಬಸ್ ಈ ಬಸ್ ಅಂತಾ ಬಸ್ ನಿಲ್ದಾಣದಲ್ಲಿ ಸುತ್ತಾಡ್ತಾರೆ. ಒಬ್ಬೊಬ್ಬರೇ ಮಹಿಳೆಯರು ಪ್ರಯಾಣಿಕರು ಕುಳಿತ ಸ್ಥಳದಲ್ಲಿ ಹೋಗಿ ಕುಳಿತು ಪರಿಚಯ ಮಾಡಿಕೊಳ್ತಾರೆ. ಒಂದಿಷ್ಟು ಸಲುಗೆ ಆದ ಬಳಿಕ ಆಭರಣ ದೋಚುತ್ತಾರೆ ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಹುಬ್ಬಳ್ಳಿ ಹಲವಾರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಆದ್ರೂ ಕೂಡ ಪೊಲೀಸರು ಕೆಲವೊಂದಿಷ್ಟು ಪ್ರಕರಣಗಳನ್ನು ಭೇದಿಸಿದ್ದಾರೆ. ಇನ್ಮುಂದೆಯಾದ್ರೂ ಸಾರ್ವಜನಿಕರು ತಮ್ಮ ತಮ್ಮ ವಸ್ತುಗಳ ಮೇಲೆ ಜಾಗರೂಕತೆ ವಹಿಸಿಕೊಳ್ಳಿ..
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/12/2025 02:13 pm