ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಯಾರಿಗೆ ಹೇಳೋಣ ಟ್ರಾಫಿಕ್ ಪ್ರಾಬ್ಲಂ ? ರೋಡ್ ಜಾಮಿಗೆ ಇಲ್ಲ ಮುಲಾಮು !

ಕುಂದಗೋಳ : ನಮಸ್ಕಾರ ರೀ ಕುಂದಗೋಳ ಮಂದಿ ಏನ್ರೀ ! ನಿಮ್ಮೂರ ಕುಂದಗೋಳದಾಗ್ ಎಷ್ಟರ ಟ್ರಾಫಿಕ್ ಆಗ್ಲಿ ಹೇಳೋರು ಕೇಳೋರು ಯಾರು ಇಲ್ಲ ಅಂತ ಹೌದೇನ್ರಿ ?

ಹೌದು ರೀ ! ಕುಂದಗೋಳ ಪರಿಸ್ಥಿತಿ ಹಿಂಗ್ ಆಗೈತಿ ನೋಡ್ರಿ, ಮೊನ್ನೆ ಮೊನ್ನೆ ಅಷ್ಟೇ ಪಾದಾಚಾರಿಗೆ ಬೈಕ್ ಗುದ್ದಿ ಆತ ಶಿವನ ಪಾದ ಸೇರಿದಾ ! ಇಂತಹ ಸಾವು ನೋವು ಆದರೂ ಟ್ರಾಫಿಕ್ ಜಾಮ್'ಗೆ ಪರಿಹಾರ ಇಲ್ಲ ನೋಡ್ರಿ.

ಕುಂದಗೋಳ ಮೂರಂಗಡಿ ಕ್ರಾಸ್,‌ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಅಂಬೇಡ್ಕರ್ ಸರ್ಕಲ್, ಗಾಳಿ ಮಾರೆಮ್ಮದೇವಿ ದೇವಸ್ಥಾನ ತಿರುವು, ಬಸ್ ಸ್ಟಾಂಡ್ ಎಂಟ್ರಿ ಈ ಎಲ್ಲಾ ಪ್ಲೇಸ್ ಟ್ರಾಫಿಕ್ ಜಾಮ್ ಜಾಮ್ ಜಾಮ್ ಐತಿ.

ಆದರಾಗ್ ಈ ಮೂರಂಗಡಿ ಕ್ರಾಸ್'ನ್ಯಾಗ್ ಬ್ರಹ್ಮಲಿಂಗೇಶ್ವರ ಗುಡಿ ಕಡೆ ಯಪ್ಪಾ ! ದಿನಾ ಇದ್ ನಮೂನೆ ಟ್ರಾಫಿಕ್ ಐತಿ.

ನಮ್ಮ ಪೊಲೀಸರು, ಬೀಟ್ ಪೊಲೀಸರು, ಸಂಚಾರಿ ಪೊಲೀಸ್ ವೆಹಿಕಲ್ ಎಲ್ಲಿದ್ದಾವೆ ಯಾರಿಗೆ ಗೊತ್ತರಿ ! ಪಾಪಾ ನಮ್ಮ ಪ್ರಜಾಪ್ರಭುತ್ವದ ಮಹಾಪ್ರಭುಗಳು ಜನ ಸಾಮಾನ್ಯರು ಇಲ್ನೋಡ್ರಿ ಹಿಂಗ್ ಟ್ರಾಫಿಕ್ ಒಳಗ್ ಸಿಕ್ಕೊಂಡಾರ್.

ಚಕ್ಕಡಿ ಎತ್ತು, ಬೈಕ್, ಬಸ್, ಆಟೋ, ಟ್ರ್ಯಾಕ್ಟರ್ ಎಲ್ಲಾ ಗಾಡಿ ಸವಾರರು ತಾವೇ ಟ್ರಾಫಿಕ್ ಕ್ಲಿಯರ್ ಮಾಡಕೊಂಡ್ ತಾವ್ ಮುಂದ್ ಹೋಗಬೇಕ್ ನೋಡ್ರಿ.

ಇದಕ್ಕೆ ಎನರ್ ಪರಿಹಾರ ಇದ್ರ್ ಜರೂರು ಮಾಡ್ರಿ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/12/2025 02:34 pm

Cinque Terre

14.8 K

Cinque Terre

0

ಸಂಬಂಧಿತ ಸುದ್ದಿ