ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸುದ್ದಿ ಬಿತ್ತರಿಸುತ್ತಿದ್ದಂತೆ ಸೆಕ್ಯೂರಿಟಿ ನೇಮಿಸಿದ ನೇಕಾರನಗರ MRP ಮಾಲೀಕ

ಪಬ್ಲಿಕ್‌ ನೆಕ್ಸ್ಟ್ ಇಂಪ್ಯಾಕ್ಟ್

ಹುಬ್ಬಳ್ಳಿ: ಇದು ಪಬ್ಲಿಕ್‌ ನೆಕ್ಸ್ಟ್ ಇಂಪ್ಯಾಕ್ಟ್ ವರದಿ. ಹುಬ್ಬಳ್ಳಿಯ ನೇಕಾರ ತಿಮ್ಮಸಾಗರ ಗುಡಿ ಹತ್ತಿರವಿರುವ MRP ಮುಂದೆಯೇ ರಾಜಾರೋಷವಾಗಿ ಸಾರಾಯಿ ಕುಡಿಯುತ್ತಿದ್ದರು. ಕುಡುಕರ ಹಾವಳಿ ಹೆಚ್ಚಾಗಿತ್ತು. ಅದನ್ನು ತಪ್ಪಿಸಲು MRP ಮಾಲೀಕ ಸೆಕ್ಯೂರಿಟಿ ನಿಲ್ಲಿಸಿದ್ದಾರೆ.

ಹೌದು,,, ನೇಕಾರನಗರ ತಿಮ್ಮಸಾಗರ ಗುಡಿ ಸರ್ಕಲ್ ಹತ್ತಿರವಿರುವ ಈ MRP ಯಿಂದ ಅಕ್ಕಪಕ್ಕದಲ್ಲಿನ ಜನರಿಗೆ ಬಹಳಷ್ಟು ತೊಂದ್ರೆಯಾಗುತ್ತಿದೆ. ಕುಡುಕರು ಅದೇ MRP ಯಿಂದ ಎಣ್ಣೆ ತೆಗೆದುಕೊಂಡು ಅಲ್ಲೇ ರಸ್ತೆ ಪಕ್ಕದಲ್ಲೇ ಕುಳಿತು ಡ್ರಿಂಕ್ಸ್ ಮಾಡುತ್ತಿದ್ದಾರೆ. ಇಲ್ಲಿ ಮಹಿಳೆಯರು, ವಯಸ್ಕರು ಓಡಾಡಲು ಮುಜುಗರವಾಗುತ್ತಿತ್ತು.

ಈ ಬಗ್ಗೆ ಪಬ್ಲಿಕ್‌ ನೆಕ್ಸ್ಟ್ ನಲ್ಲಿ ಸುದ್ದಿ ಬಿತ್ತರಿಸುತ್ತಿದ್ದಂತೆ, MRP ಮಾಲೀಕ ಸೆಕ್ಯೂರಿಟಿ ನೇಮಿಸಿ ಅಲ್ಲಿ ಯಾರೂ ಕುಡಿಯದಂತೆ ನೋಡಿಕೊಳ್ಳುತ್ತಿದ್ದಾರೆ. ಇದು ನಿರಂತರವಾಗಿ ನಡೆಯಬೇಕು, ಮತ್ತೇ ಅಲ್ಲಿನೇ ಕುಳಿತು ಡ್ರಿಂಕ್ಸ್ ಮಾಡೋದಕ್ಕೆ ಅವಕಾಶ ಕೊಟ್ರೆ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

-ಈರಣ್ಣ ವಾಲಿಕಾರ, ಕ್ರೈಂ ಬ್ಯೂರೋ ಪಬ್ಲಿಕ್‌ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/12/2025 12:24 pm

Cinque Terre

10.06 K

Cinque Terre

0

ಸಂಬಂಧಿತ ಸುದ್ದಿ