ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಠ ಬಿಟ್ಟು ಹೋದ ಸ್ವಾಮೀಜಿ, ಸಂಪರ್ಕಕ್ಕೆ ಸಿಗದ ಕಾವಿಧಾರಿ

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಶಿವಾನಂದಮಠದ ಶಿವಾನಂದ ಸರಸ್ವತಿ ಸ್ವಾಮೀಜಿ, ತನ್ನ ರಾಸಲೀಲೆ ವೀಡಿಯೋ ವೈರಲ್ ಆಗುವ ಮುಂಚೆಯೇ ಮಠ ತೊರೆದು ಹೊರ ನಡೆದಿದ್ದಾರೆ. ಸದ್ಯ ಅವರು ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ.

ಮಠದಲ್ಲಿ ಓರ್ವ ಮಹಿಳೆಯಿಂದ ಈ ಸ್ವಾಮೀಜಿ ಸ್ನಾನ ಮಾಡಿಸಿಕೊಳ್ಳುವುದು, ಮಸಾಜ್ ಮಾಡಿಸಿಕೊಳ್ಳುವುದು, ಸ್ವಾಮೀಜಿ ತನ್ನ ಖಾಸಗಿ ಜಾಗವನ್ನು ಮಸಾಜ್ ಮಾಡಿಸಿಕೊಳ್ಳುವ ವೀಡಿಯೋವನ್ನು ಒಂದು ಗ್ಯಾಂಗ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿತ್ತು. 20 ಲಕ್ಷ ಕೊಟ್ಟರೆ ವೀಡಿಯೋ ವೈರಲ್ ಮಾಡುವುದಿಲ್ಲ ಎಂದು ಆ ಸ್ವಾಮೀಜಿಗೆ ಬೇಡಿಕೆ ಇಟ್ಟಿತ್ತು. ಕೊನೆಗೆ ಈ ಡೀಲ್ 10 ಲಕ್ಷಕ್ಕೆ ಮುಗಿದು ಕೊನೆಗೆ ಆ ಗ್ಯಾಂಗ್‌ಗೆ ಸ್ವಾಮೀಜಿ 7 ಲಕ್ಷ ಕೊಟ್ಟಿದ್ದ. ಬಾಕಿ 3 ಲಕ್ಷ ಕೊಡದೇ ಇದ್ದಿದ್ದಕ್ಕೆ ಆ ಗ್ಯಾಂಗ್ ವೀಡಿಯೋ ವೈರಲ್ ಮಾಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಆದರೆ, ಈ ವೀಡಿಯೋ ವೈರಲ್ ಆಗುವ ಮುನ್ನವೇ ಗ್ರಾಮಸ್ಥರಿಗೆ ಈ ವಿಚಾರ ಗೊತ್ತಾದ ತಕ್ಷಣ ಗ್ರಾಮಸ್ಥರು ಆ ಸ್ವಾಮೀಜಿಗೆ ಛೀಮಾರಿ ಹಾಕಿದ್ದರು. ಇದರಿಂದ ಆ ಸ್ವಾಮೀಜಿ ಮೊದಲೇ ಮಠ ತೊರೆದಿದ್ದರು. ವೀಡಿಯೋ ವೈರಲ್ ಆದ ತಕ್ಷಣ ಸ್ವಾಮೀಜಿ ಈಗ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ.

ಇನ್ನು ಈ ವೀಡಿಯೋ ವೈರಲ್ ಆದ ವಿಷಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ಬಂದಿದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ಖುದ್ದಾಗಿ ಬಂದು ನಮಗೆ ದೂರು ಕೊಟ್ಟಿಲ್ಲ. ಈ ಬಗ್ಗೆ ನಾವೂ ವಿಚಾರಣೆ ನಡೆಸಿದ್ದೇವೆ ಎಂದಿದ್ದಾರೆ.

ಒಟ್ಟಾರೆ ಧಾರವಾಡ ಜಿಲ್ಲೆಯಲ್ಲಿ ಕಾವಿಧಾರಿಯೊಬ್ಬ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಈ ವೀಡಿಯೋ ಎಲ್ಲ ಕಡೆ ಸಖತ್ ವೈರಲ್ ಆಗಿದೆ. ಈ ವೀಡಿಯೋ ಮಾಡಿದ ಗ್ಯಾಂಗ್ ಯಾವುದು? ಹಣ ಪಡೆದ ಗ್ಯಾಂಗ್ ಯಾವುದು ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/12/2025 08:43 pm

Cinque Terre

36.83 K

Cinque Terre

1

ಸಂಬಂಧಿತ ಸುದ್ದಿ