ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್....
ಹುಬ್ಬಳ್ಳಿ: ಮನೆಯಲ್ಲಿ ಬಡತನ, ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕೆಂದು ಅದೆಷ್ಟೊ ಬಡ ವಿದ್ಯಾರ್ಥಿಗಳು ತಮ್ಮ ಮನೆಯನ್ನು ತೊರೆದು ಹಾಸ್ಟೆಲ್‌ಗಳಿಗೆ ಬರುತ್ತಾರೆ. ಆದ್ರೆ ಈ ಹಾಸ್ಟೆಲ್ ವಾರ್ಡನ್ ಗಳು ಮಾಡುವ ಅವಾಂತರದಿಂದ ವಿದ್ಯಾರ್ಥಿಗಳ ಬದುಕೇ ನಾಶವಾಗುತ್ತದೆ. ಕಳಪೆ ಮಟ್ಟದ ಆಹಾರ ಕೊಟ್ಟು ಹಾಸ್ಟೆಲ್ ವಿದ್ಯಾರ್ಥಿನಿಯರ ಜೀವದ ಜೊತೆ ಚೆಲ್ಲಾಟ ಆಡ್ತಿದ್ದ ಹುಬ್ಬಳ್ಳಿಯ ರಾಜ ನಗರದಲ್ಲಿರುವ ದೇವರಾಜ ಅರಸ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೆಲ್ ವಾರ್ಡನ್ ಶೋಭಾ ಚಾಕಲಬ್ಬಿಯನ್ನು ಜಿಲ್ಲಾಡಳಿತ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಹೌದು,,, ಈ ರಾಜನಗರದಲ್ಲಿರುವ BCM ಬಾಲಕಿಯರ ಹಾಸ್ಟೆಲ್‌ನಲ್ಲಿ ನೂರಾರು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದರು. ಆದ್ರೆ ಅಲ್ಲಿನ ಹಾಸ್ಟೆಲ್ ವಾರ್ಡನ್ ಶೋಭಾ ಚಾಕಲಬ್ಬಿ ಅವರು, ವಿದ್ಯಾರ್ಥಿನಿಯರಿಗೆ ಸರಿಯಾಗಿ ಗುಣಮಟ್ಟದ ಊಟ ಕೊಡುತ್ತಿರಲಿಲ್ಲ, ಕಳಪೆ ಆಹಾರ ನೀಡುತ್ತಿದ್ದರು. ಕೊಳೆತ ತರಕಾರಿ ಹಾಕಿ ಅಡುಗೆ ಮಾಡುತ್ತಿದ್ದರು. ಊಟದಲ್ಲಿ ಹುಳುಗಳು ಬರುತ್ತಿದ್ದವು.
ಶೌಚಾಲಯಕ್ಕೆ ಹೋಗಬೇಕಾದ್ರೆ ನರಕ ಆಗುತ್ತಿತ್ತು. ಇಡೀ ಹಾಸ್ಟೆಲ್ ವ್ಯವಸ್ಥೆಯನ್ನೇ ಹಾಳು ಮಾಡಿದ್ದರು. ಬಡ ಹೆಣ್ಣು ಮಕ್ಕಳಿಗೆ ನಿತ್ಯ ನರಕದರ್ಶನ ಮಾಡುವಂತೆ ಮಾಡಿದ್ದ ವಾರ್ಡನ್ ಶೋಭಾ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಜಿಲ್ಲಾಡಳಿತ ತನಿಖೆ ನಡೆಸಿದೆ. ತನಿಖೆಯಲ್ಲಿ ವಾರ್ಡನ್ ತಪ್ಪು ಕಂಡುಬಂದ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯತ್ ಸಿಇಓ ಭುವನೇಶ್ವರ್ ಕುಮಾರ್ ಅವರು ಹಾಸ್ಟೆಲ್ ವಾರ್ಡನ್ ಶೋಭಾ ಚಾಕಲಬ್ಬಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನು ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡ್ತಿದ್ರೂ ಕೂಡ ತಾಲ್ಲೂಕು ಹಿಂದುಳಿದ ಕಲ್ಯಾಣಾಧಿಕಾರಿ ನಾಗರತ್ನ ಅವರು ಸುಮ್ಮನಿರುವುದು ಯಾಕೆ....? ಇದರಲ್ಲಿ ಅವರ ಕೈವಾಡವೂ ಇದೆಯಾ ಎಂಬ ಅನುಮಾನ ಮೂಡುತ್ತಿದೆ. ಇದು ಒಂದೇ ಹಾಸ್ಟೆಲ್‌ಗಳಲ್ಲಿ ಈ ರೀತಿ ಅವ್ಯವಸ್ಥೆ ಆಗಿಲ್ಲ, ಸುಮಾರು ಹಾಸ್ಟೆಲ್ ಗಳಲ್ಲಿ ಎಷ್ಟೋ ವಿದ್ಯಾರ್ಥಿಗಳು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಕಳಪೆ ಆಹಾರದಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ಕೂಡಲೇ ಜಿಲ್ಲಾಡಳಿತ ತಾಲ್ಲೂಕು ಅಧಿಕಾರಿಗಳತ್ತನೂ ಗಮನ ಹರಿಸಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/12/2025 01:05 pm