ಧಾರವಾಡ: ಎಸ್‌ಟಿ ಸಮುದಾಯದವರ ಶವ ಸಂಸ್ಕಾರಕ್ಕೆ ಗ್ರಾಮದಲ್ಲಿ ರುದ್ರಭೂಮಿ ಇಲ್ಲದೇ ಇರುವುದರಿಂದ ಆಕ್ರೋಶಗೊಂಡ ಎಸ್‌ಟಿ ಸಮುದಾಯದ ಜನ ಗ್ರಾಮ ಪಂಚಾಯ್ತಿ ಎದುರೇ ಸೌದೆ ತಂದಿಟ್ಟು ರುದ್ರಭೂಮಿಗಾಗಿ ಪ್ರತಿಭಟನೆ ನಡೆಸಿದ ಘಟನೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಮುಮ್ಮಿಗಟ್ಟಿ ಗ್ರಾಮದಲ್ಲಿ ಎಸ್‌ಟಿ ಸಮುದಾಯದವರು ಯಾರಾದರೂ ತೀರಿ ಹೋದರೆ ಅವರ ಶವ ಸಂಸ್ಕಾರಕ್ಕೆ ಜಾಗವೇ ಇಲ್ಲದಾಗಿದೆ. ಸದ್ಯ ಇರುವ ಜಾಗದಲ್ಲಿ ಈಗ ವಿವಾದ ಸೃಷ್ಟಿಯಾಗಿದೆ. ಹೀಗಾಗಿ ಶಾಶ್ವತ ರುದ್ರಭೂಮಿಯನ್ನು ಎಸ್‌ಟಿ ಸಮುದಾಯಕ್ಕೆ ಮಂಜೂರು ಮಾಡಿಕೊಡಬೇಕು ಎಂದು ಎಸ್‌ಟಿ ಸಮುದಾಯದ ಜನ ಪಂಚಾಯ್ತಿ ಎದುರೇ ಸೌದೆ ತಂದಿಟ್ಟು ಪ್ರತಿಭಟನೆ ನಡೆಸಿದರು. ಪಂಚಾಯ್ತಿ ಹಾಗೂ ಎಸ್‌ಟಿ ಸಮುದಾಯದ ಜನರ ಮಧ್ಯೆ ಕೆಲಹೊತ್ತು ವಾಗ್ವಾದ ಕೂಡ ನಡೆಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/12/2025 06:25 pm
LOADING...