ಹುಬ್ಬಳ್ಳಿ: ಹುಬ್ಬಳ್ಳಿ- ಗದಗ ರೋಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿವೆ. ಇದಕ್ಕೆ ಕಾರಣವೆಂದ್ರೆ ವೇಗವಾಗಿ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಇಂದು ಸ್ಪೀಡ್ ಆಗಿ ಹೋಗುತ್ತಿದ್ದ ಸಾರಿಗೆ ಬಸ್‌ಗಳನ್ನು ತಡೆದು ಯುವಕನೊಬ್ಬ ತರಾಟೆಗೆ ತೆಗೆದುಕೊಂಡಿರುವ ಘಟನೆ ಹುಬ್ಬಳ್ಳಿ ಗದಗ ರೋಡ್‌ನಲ್ಲಿ ನಡೆದಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣ ಬ್ರಿಡ್ಜ್‌ನಿಂದ ರಿಂಗ್ ರೋಡ್ ವರೆಗೂ ಸಿಟಿ ಸ್ಪೀಡ್ ಲಿಮಿಟ್ ಇರಬೇಕು. ಆದ್ರೆ ನಾನ್ ಸ್ಟಾಪ್ ಗದಗ ಬಸ್ ಚಾಲಕರು ಮಾತ್ರ ಯಾವುದೇ ನಿಯಮಗಳನ್ನು ಪಾಲನೆ ಮಾಡದೆ ಸ್ಪೀಡ್ ಆಗಿ ಬಸ್ ಓಡಿಸುತ್ತಿದ್ದು, ಅಪಘಾತಕ್ಕೆ ಇವರೇ ಕಾರಣ ಆಗುತ್ತಿದ್ದಾರೆ. ಅದಕ್ಕೆ ಗದಗ ಮಂಟೂರ ರೋಡ್ ಯುವಕನೊಬ್ಬ ಬಸ್‌ಗಳನ್ನು ತಡೆದು ಚಾಲಕರನ್ನು ತರಾಟೆ ತೆಗೆದುಕೊಂಡಿದ್ದಾನೆ. ಕೂಡಲೇ ಸಂಬಂಧಿಸಿದ ಸಾರಿಗೆ ಸಂಸ್ಥೆ ಹಿರಿಯ ಅಧಿಕಾರಿಗಳು ಇಂತಹ ವಿಷಯ ಬಗ್ಗೆ ಗಮನಿಸಿ ಎಲ್ಲ ಚಾಲಕರಿಗೆ ನಿಯಮ ಪಾಲನೆ ಮಾಡಲು ಸೂಚನೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/12/2025 10:30 pm
LOADING...