ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಕೂಡ್ಲು ಫಾಲ್ಸ್ ನ ಬಂಡೆಯ ಮೇಲಿನಿಂದ ಬಿದ್ದು ಯುವಕ ಸಾವು

ಹೆಬ್ರಿ: ಇಲ್ಲಿಗೆ ಸಮೀಪದ ಪ್ರವಾಸಿ ತಾಣ ಕೂಡ್ಲು ಫಾಲ್ಸ್ ನ ಬಂಡೆಯ ಮೇಲಿನಿಂದ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತರನ್ನು ಉಡುಪಿಯ ಕೊಂಜಾಡಿ ಮೂಲದ ಬೆಂಗಳೂರು ನಿವಾಸಿ ಸವಿತಾ ಪಿ. ಶೆಟ್ಟಿ ಎಂಬವರ ಮಗ ಮನ್ವಿತ್ (25) ಎಂದು ಗುರುತಿಸಲಾಗಿದೆ.

ಮನ್ವಿತ್ ತಮ್ಮ ಸ್ವಂತ ಮನೆಯಾದ ಕೊಂಜಾಡಿಗೆ ಬಂದಿದ್ದು, ತನ್ನ ಸ್ನೇಹಿತರೊಂದಿಗೆ ಹೆಬ್ರಿಯ ಕೂಡ್ಲು ಫಾಲ್ಸ್ ಗೆ ಹೋಗಿದ್ದರು. ಅಲ್ಲಿ ಸ್ನೇಹಿತರು ಸ್ನಾನ ಮಾಡುತ್ತಿರುವಾಗ ಮನ್ವಿತ್ ಎತ್ತರದ ಬಂಡೆಯ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಅವರು ಆಕಸ್ಮಿಕವಾಗಿ ತಲೆ ತಿರುಗಿ ಕೆಳಗೆ ನೀರಿಗೆ ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ.

ಮನ್ವಿತ್ ರಿಗೆ ಮೂರ್ಛೆ ರೋಗವಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

18/12/2025 08:33 pm

Cinque Terre

13.13 K

Cinque Terre

0

ಸಂಬಂಧಿತ ಸುದ್ದಿ