ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾರಾಗೃಹದಲ್ಲಿ ನಾಲ್ಕು ಮೊಬೈಲ್ ಫೋನ್‌ಗಳು ಪತ್ತೆ-ಪೊಲೀಸರ ಕಾರ್ಯಾಚರಣೆ

ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹದೊಳಗೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಜೈಲಿನ ಕೊಠಡಿಯೊಳಗೆ ಒಟ್ಟು 4 ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಾಗೃಹ ಅಧೀಕ್ಷಕ ಶರಣಬಸಪ್ಪ ಸೋಮವಾರ ಅನಿರೀಕ್ಷಿತ ತಪಾಸಣೆಗೆ ಹೋದಾಗ ವಿಚಾರಣಾ ಧೀನ ಕೈದಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

ಅದೇ ದಿನ ಸಂಜೆ ಮತ್ತೆ ಅನಿರೀಕ್ಷಿತ ತಪಾಸಣೆ ಮಾಡಲಾಗಿತ್ತು. ಈ ವೇಳೆ ಕೈದಿಗಳು ಎರಡು ವಿಭಾಗಗಳ ಕಬ್ಬಿಣದ ಗೇಟ್ ಗಳನ್ನು ಅಲ್ಲಾಡಿಸುತ್ತಾ ಮುರಿಯುವ ರೀತಿಯಲ್ಲಿ ಜೋರಾಗಿ ಕೂಗಾಡುತ್ತಾ ಗಲಾಟೆ ಮಾಡುತ್ತಿದ್ದರು.

ಕೂಡಲೇ ಮಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಪಡೆ ಹಾಗೂ ಠಾಣೆಯ ಅಧಿಕಾರಿ, ಸಿಬ್ಬಂದಿ ಕಾರಾಗೃಹದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.

ಮದ್ ಗಲಾಟೆಯ ಬಳಿಕ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗಲಾಟೆಯಲ್ಲಿ 'ಎ' ವಿಭಾಗದ ಮೊಯ್ದಿನ್ ಫರಾದ್, ಸರ್ಫರಾಜ್, ಮುಹಮ್ಮದ್ ಅಲ್ತಾಫ್, ಇಮ್ಮಿಯಾಝ್, ಅಬ್ದುಲ್ ನೌಜೀದ್, ಮುಹಮ್ಮದ್ ಸಾಯಿಲ್ ಅಕ್ರಂ ಮತ್ತು ಮುಹಮ್ಮದ್ ಹನೀಫ್ ಹಾಗೂ 'ಬಿ' ವಿಭಾಗದ ಲತೇಶ್ ಜೋಗಿ, ಮಂಜುನಾಥ, ಮುರುಗನ್, ಸಚಿನ್ ತಲಪಾಡಿ, ತುಷಾರ್ ಅಮೀನ್, ಶಬರೀಶ, ಗುರುರಾಜ ಹಾಗೂ ಸುಮಂತ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಕಂಡು ಬಂದಿದ್ದು ಅವರ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
PublicNext

PublicNext

18/12/2025 09:27 pm

Cinque Terre

12.08 K

Cinque Terre

0

ಸಂಬಂಧಿತ ಸುದ್ದಿ