ಬೆಂಗಳೂರು: ಪಬ್ನಲ್ಲಿ ನಡೆದ ಗಲಾಟೆ ವಿಚಾರ ಇನ್ನೂ ಸಹ ಬೂದಿ ಮುಚ್ಚಿದ ಕೆಂಡದಂತಾಗಿದೆ. ಯಾಕಂದ್ರೆ ಇಂದು ಸಹ ಕೆಲ ಕಾರ್ಯಕರ್ತರು ಆ ಒಂದು ಘಟನೆಯನ್ನು ಆಧರಿಸಿ ಪೊಲೀಸ್ ಠಾಣೆಯಲ್ಲಿ ಮುಂದೆ ಪ್ರತಿಭಟನೆ ಮಾಡಿದ್ರು. ಆರೋಪಿಯನ್ನು ಯಾವ ಕಾರಣಕ್ಕೆ ಬಿಟ್ಟು ಕಳುಹಿಸಿದ್ದೀರಾ ಅಂತ ಪ್ರಶ್ನೆ ಮಾಡಿ ಮುನಿರತ್ನಗೆ ಛೀಮಾರಿ ಹಾಕಿದ್ರು.
ಬೆಂಗಳೂರು: ಸೈಕಲ್ ಗ್ಯಾಪ್ ಪಬ್ ನಲ್ಲಿ ಗಲಾಟೆ ಪ್ರಕರಣ ಯಾಕೋ ಮುಗಿಯುವ ರೀತಿ ಕಾಣಿಸ್ತಾಯಿಲ್ಲ. ಯಾಕಂದ್ರೆ ಪೊಲೀಸರಿಂದ ಸರಿಯಾದ ಕ್ರಮ ಆಗಿಲ್ಲ ಎಂದು ಇಂದು ಜ್ಞಾನ ಭಾರತಿ ಪೊಲೀಸ್ ಠಾಣೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ರು. ಕಾಂಗ್ರೆಸ್ ನ ಬೆಂಗಳೂರು ಪಶ್ಚಿಮ ಭಾಗದ ಅಧ್ಯಕ್ಷರಾದ ಹನುಂಮತರಾಯಪ್ಪ ನೇತೃತ್ವದಲ್ಲಿ ಜ್ಞಾನಭಾರತಿ ಠಾಣೆ ಮುಂಭಾಗ ಪ್ರತಿಭಟನೆ ಮಾಡಲಾಯಿತು. ಪುಂಡರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅವರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ರೆ ಅವರನ್ನು ಪೊಲೀಸರೇ ಬಿಟ್ಟು ಕಳಿಸಿಕೊಟ್ಟಿದ್ದಾರೆ ಎಂಬ ಆರೋಪವನ್ನು ಮಾಡಿದ್ರು. ಇನ್ನು ಸಂತ್ರಸ್ತರನ್ನು ಪರಿಗಣಿಸದೆ ಪುಂಡರ ಪರವಾಗಿ ಕಾರ್ಯನಿರ್ವಹಿಸಲಾಗಿದೆ ಎಂದು ಕಿಡಿಕಾರಿದರು.
ಇನ್ನು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ರು. ಗೂಂಡಾ, ರೇಪಿಸ್ಟ್, ಭೂಗಳ್ಳ, ಮುನಿರತ್ನಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ರು. ಇದೀಗ ಯುವತಿಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪ ಹೊತ್ತಿರುವ ಉಮೇಶ್ ಮತ್ತು ಶಾಸಕ ಮುನಿರತ್ನರವರ ಚೇಲಾ. ಹೀಗಾಗಿ ಅವರ ಬುದ್ಧಿಯೇ ಈತನಿಗೂ ಬಂದಿದೆ ಎಂದು ಆರೋಪ ಮಾಡಿ ಮುನಿರತ್ನ ಚೇಲಾಗಳನ್ನ ಬಂಧಿಸಬೇಕು ಎಂದು ಘೋಷಣೆ ಮಾಡಿದ್ರು. ಇನ್ನು ಪೊಲೀಸರ ಮೇಲೆಯು ಸಹ ಆರೋಪ ಮಾಡಿದ ಕಾರ್ಯಕರ್ತರು ಇನ್ಸ್ಪೆಕ್ಟರ್ ರವಿ, ಎಸಿಪಿ ಬಸವರಾಜ್ ತೇಲಿ ಪೊಲೀಸ್ ಠಾಣೆಯನ್ನು ರಿಯಲ್ ಎಸ್ಟೇಟ್ ಆಫೀಸ್ ಮಾಡ್ಕೊಂಡಿದ್ದಾರೆ ಎಂದು ಆರೋಪ ಮಾಡಿದ್ರು. ಇನ್ನು ಆದಷ್ಟು ಬೇಗನೇ ಆರೋಪಿಯಾಗಿರುವ ಉಮೇಶ್ ನನ್ನು ಬಂಧಿಸಬೇಕು ಎಂದು ಡಿಸಿಪಿ ಅನಿತಾ ಬಿ. ಹದ್ದಣ್ಣ ನವರ್ ರಿಗೆ ಮನವಿ ಸಲ್ಲಿಸಿದ್ರು. ಈ ದಿನದ ಒಳಗಾಗಿ ಬಂಧನ ಮಾಡದೇ ಇದ್ದರೇ ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡೋದಾಗಿ ಹೇಳಿದ್ರು.
ಒಟ್ಟಿನಲ್ಲಿ ಅದೇನೆ ಇದ್ರು ಸಹ ಈ ಒಂದು ಗಲಾಟೆ ಇದೀಗ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ರಾಜಕೀಯವಾಗಿ ಬಣ್ಣ ಪಡೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಯಾವ ಮಟ್ಟಕ್ಕೆ ಈ ಕೇಸ್ ಸಾಗಲಿದೆ ಅಂತ ಕಾದು ನೋಡಬೇಕಿದೆ.
PublicNext
19/12/2025 05:39 pm