ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿ ರಾಮ್ ಜಿ ಯೋಜನೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಿದ್ದೇವೆ: ಕೋಟಾ ಶ್ರೀನಿವಾಸ ಪೂಜಾರಿ

ಕಾರವಾರ: ಎಂಜಿ ನರೇಗಾ ಯೋಜನೆಯ ಬದಲಿಗೆ ಜಿ ರಾಮ್ ಜಿ ಯೋಜನೆ ಬಂದಿದೆ. ಆದರೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಈ ಯೋಜನೆ ಬಗ್ಗೆ ಜನರಿಗೆ ಮುಟ್ಟಿಸಲು ಜ.15 ರಿಂದ ಫೆ.28ರ ವರೆಗೆ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೂದೆ ಬಂದಾಗ ಸ್ವಾಭಾವಿಕವಾಗಿ ಚರ್ಚೆಗಳು ನಡೆಯುತ್ತವೆ. ಈ ಕಾಯ್ದೆಯ ಉದ್ದೇಶ ಭದ್ರತೆಯ ಹೆಚ್ಚು ಉದ್ಯೋಗ, ಬ್ರಷ್ಟಾಚಾರದ ನಿಯಂತ್ರಣವಾಗಿದೆ.‌ ಆದರೆ ಕಾಂಗ್ರೆಸ್ ಪಕ್ಷವು ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದರು.

ಯುಪಿಎ ಸರಕಾರ ಇದ್ದಾಗ ಯೋಜನೆಗೆ 33 ಸಾವಿರ ಕೋಟಿ ಬಜೆಟ್ ಇತ್ತು. ಇಂದು 84 ಸಾವಿರ ಕೋಟಿ ಆಗಿದೆ. ಆದರೂ ಟೀಕೆಗಳಿಗೆ ಉತ್ತರ ನೀಡಬೇಕಿದೆ. ಮೊದಲು 100 ದಿನ ಉದ್ಯೋಗ ಇತ್ತು ಇಂದು 125 ದಿನಕ್ಕೆ ವಿಸ್ತರಿಸಲಾಗಿದೆ. ಇಂದು ಏಳು ದಿನದೊಳಗೆ ವೇತನ ನೀಡುವಂತೆ ತಿಳಿಸಲಾಗಿದೆ. ತನಿಖಾ ವರದಿಯಲ್ಲಿ ನಕಲಿ ಜಾಬ್ ಕಾರ್ಡ್ ಸೃಷ್ಟಿಯಾಗಿವೆ. ಪಶ್ಚಿಮ ಬಂಗಾಳ ಹಾಗೂ ತೆಲಂಗಾಣದಲ್ಲಿ ಸಾಕಷ್ಟು ಬ್ರಷ್ಟಾಚಾರ ಮಾಡಲಾಗಿದೆ. ಇವೆಲ್ಲವನ್ನು ತೆಗೆದುಹಾಕಲು ಯೋಜನೆಯಲ್ಲಿ ಹೊಸ ನಿಯಮ ರೂಪಿಸಲಾಗಿದೆ ಎಂದರು.

ಗಾಂಧಿ ಅವರ ಮೂಲ‌ ತತ್ವಗಳನ್ನು ಪಾಲಿಸುವ ಪಕ್ಷಗಳಲ್ಲಿ ಬಿಜೆಪಿಯು ಒಂದು. ಕೇಂದ್ರ ಅಥವಾ ರಾಜ್ಯ ಸರಕಾರವು ಹೊಸ ಕಾಯ್ದೆ ಬಂದಾಗ ಸ್ವಾಭಾವಿಕವಾಗಿ ಹೆಸರು ಬದಲಾಗುತ್ತದೆ. ಬಡವರಿಗೆ ಉದ್ಯೋಗ ನೀಡುವ ಉದ್ಯೋಗಖಾತ್ರಿ ಯೋಜನೆಗೂ ವಿದ್ಯಾವಂತರಿಗೆ ಉದ್ಯೋಗ ನೀಡುವುದಕ್ಕೂ ಸಂಬಂಧವಿಲ್ಲ. ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ನಲ್ಲಿ ಬದಲಾವಣೆಯಾಗಿದೆ. ಕಾರವಾರ ಹಾಗೂ ಉಡುಪಿಯಲ್ಲಿ ಪೋರ್ಟ್ ಸಂಖ್ಯೆ ಕಡಿಮೆಯಾಗಿದ್ದು ವಾಪಸ್ ಬರಿತ್ತಿದ್ದಾರೆ‌.

ಬ್ಯಾಂಕ್ ಸೌಲಭ್ಯದಲ್ಲಿಯೂ ಬದಲಾವಣೆಯಾಗಿವೆ. ಪೆಟ್ರೋಲ್ ಬಂಕ್ ಗಳನ್ನು ಹಸಕಾರಿ ಸಂಘಗಳಿಗೆ ನೀಡಲಾಗುತ್ತದೆ. ಜೆಜೆಎಂ ಯೋಜನೆಗೆ ದಿಶಾ ಸಭೆಯಲ್ಲಿ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಪ್ರಶ್ಬೆಗಳಿಗೆ ಉತ್ತರಿಸಿದರು.

ಬಿಜಿಪಿ ಜಿಲ್ಲಾಧ್ಯಕ್ಷ ಎನ್ಎಸ್ ಹೆಗಡೆ, ಒಬಿಸಿ ಮೋರ್ಚಾ ಅಧ್ಯಕ್ಷ ರಾಜೇಶ ನಾಯ್ಕ, ನಾಗರಾಜ ನಾಯ್ಕ, ಸಂಜಯ ಸಾಳುಂಕೆ, ಮನೋಜ ಭಟ್, ಜಗದೀಶ ಮೊಗಟ, ಸುನೀಲ‌ಸೋನಿ, ನಯನಾ, ಸದಾನಂದ ಭಟ್ ಇದ್ದರು.‌

Edited By : PublicNext Desk
Kshetra Samachara

Kshetra Samachara

09/01/2026 04:42 pm

Cinque Terre

8.24 K

Cinque Terre

0

ಸಂಬಂಧಿತ ಸುದ್ದಿ