ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಾಜ್ಯ ಅಂಡರ್ 19ರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅಕ್ಫಿನ್ ರೂಹಿಗೆ ಅಭಿನಂದಿಸಿದ ವಿಎಸ್‌ವಿ ಪ್ರಸಾದ್

ಧಾರವಾಡ: ಧಾರವಾಡದ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆಯುತ್ತಿರುವ ಕುಮಾರಿ ಅಕ್ಫಿನ್ ರೂಹಿ ಕೆ. ದೊಡ್ಡಮನಿ ಕರ್ನಾಟಕ ರಾಜ್ಯ ಅಂಡರ್ 19 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು, ಈ ಕ್ರೀಡಾಪಟುವಿಗೆ ಸ್ವರ್ಣಾ ಗ್ರೂಪ್ ಆಫ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ. ಎಸ್. ವಿಎಸ್‌ವಿ ಪ್ರಸಾದ್ ಅಭಿನಂದಿಸಿದ್ದಾರೆ.

ಧಾರವಾಡದ ಎಲ್‌ಇಎ ಸಂಸ್ಥೆಯ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗಿಯಾದ ವಿಎಸ್‌ವಿ ಪ್ರಸಾದ್ ಅವರು, ಕುಮಾರಿ ಅಕ್ಫಿನ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಪ್ರಸಾದ್ ಅವರು, ನಾನು ಎಲ್ಲವನ್ನೂ ಸಾಧಿಸುತ್ತೇನೆ ಎಂಬ ಛಲ ಇಂದಿನ ಯುವಕರಲ್ಲಿರಬೇಕು. ಅದೇ ಛಲದಿಂದ ಇದೀಗ ಅಕ್ಫಿನ್ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾಳೆ ಎಂದರು.

ಇದಕ್ಕೂ ಮುನ್ನ ಪ್ರಸಾದ್ ಅವರು ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಧಾರವಾಡ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಅಕಾಡೆಮಿಯ ತರಬೇತುದಾರ ಜಗದೀಶ ಸಸಾಲಟ್ಟಿ, ಅಕಾಡೆಮಿ ಅಧ್ಯಕ್ಷ ಶಿವಲಿಂಗ ನೀಲಗುಂದ, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಗೌರವ ಕಾರ್ಯದರ್ಶಿ ಚಂದ್ರಕಾಂತ ಮಟ್ಟಿ, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಜಂಟಿ ಕಾರ್ಯದರ್ಶಿ ಶಿವಪುತ್ರ ಅಗಡಿ, ಕಾರ್ಯಾಧ್ಯಕ್ಷ ರಾಜಶೇಖರ ಬೆಳ್ಳಕ್ಕಿ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/01/2026 03:04 pm

Cinque Terre

190.54 K

Cinque Terre

1

ಸಂಬಂಧಿತ ಸುದ್ದಿ