ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ರೀಡೆಯಿಂದ ಆತ್ಮಸ್ಥೈರ್ಯ, ಮನೋಬಲ ಜೊತೆಗೆ ಆರೋಗ್ಯವು ಕೂಡ ವೃದ್ಧಿ - ಡಾ. ವಿಎಸ್‌ವಿ ಪ್ರಸಾದ್

ಹುಬ್ಬಳ್ಳಿ: ಹುಬ್ಬಳ್ಳಿಯ ಸಂಶಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ, ನವೀನ್ ಪಾರ್ಕ್ ನಿವಾಸಿಗಳ ಸಂಘದ ಸಹಯೋಗದೊಂದಿಗೆ, ಎರಡು ದಿನಗಳ ಕಾಲ ನಡೆದ "ಸ್ವರ್ಣಾ ಕಪ್" ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಮಹತ್ವದ ಪಂದ್ಯಾವಳಿಯಲ್ಲಿ ಹಾವೇರಿ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಬಳ್ಳಾರಿ, ಗದಗ, ಹೊಸಪೇಟೆ, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 105 ಯುವ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಕ್ರೀಡಾ ಮನೋಭಾವಕ್ಕೆ ಪ್ರೋತ್ಸಾಹ

ಈ ಬಾರಿಯ ಪಂದ್ಯಾವಳಿಯ ವಿಶೇಷತೆಯೆಂದರೆ, ಅಕಾಡೆಮಿ ವತಿಯಿಂದ ಇದೇ ಮೊದಲ ಬಾರಿಗೆ U-7 (7 ವರ್ಷದೊಳಗಿನ) ವಿಭಾಗವನ್ನು ಪರಿಚಯಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ವರ್ಣಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಎಚ್.ವಿ.ಎಸ್.ವಿ. ಪ್ರಸಾದ್ ಅವರು ಮಾತನಾಡಿ, "ಭವಿಷ್ಯದ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಹಾಗೂ ಎಲ್ಲ ವಯೋಮಾನದವರಿಗೂ ಕ್ರೀಡೆಯ ಪ್ರಯೋಜನ ದೊರೆಯುವಂತೆ ಮಾಡಲು, 10 ವರ್ಷಗಳ ಹಿಂದೆ ಡಾ. ವಿಜಯ ಸಂಕೇಶ್ವರ್ ಅವರ ನೇತೃತ್ವದಲ್ಲಿ ನಮ್ಮ ನವೀನ್ ಪಾರ್ಕ್‌ನಲ್ಲಿ 4 ಅಂತರರಾಷ್ಟ್ರೀಯ ಗುಣಮಟ್ಟದ ವುಡನ್ ಕೋರ್ಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿದಿನ ಸುಮಾರು 200 ಜನರು ಇಲ್ಲಿ ತರಬೇತಿ ಪಡೆಯಲು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಬರುತ್ತಾರೆ. ಕ್ರೀಡೆಯಿಂದ ಆತ್ಮಸ್ಥೈರ್ಯ, ಮನೋಬಲ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಇಂತಹ ಕ್ರೀಡಾಕೂಟವನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸಿರುವುದು ಅತ್ಯಂತ ಸಂತಸದ ವಿಷಯ" ಎಂದರು. ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೂ ಹಾಗೂ ವಿಜೇತರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಪ್ರಶಸ್ತಿಗಳನ್ನು ವಿತರಿಸಿ ಶುಭ ಹಾರೈಸಿದರು.

ಗಣ್ಯರ ಉಪಸ್ಥಿತಿ

ಈ ಸಂದರ್ಭದಲ್ಲಿ ಸಂಶಿ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ನಾಗೇಂದ್ರ ಜಿ. ಸಂಶಿ, ಮುಖ್ಯ ತರಬೇತುದಾರ ಸಾಗರ್ ಎನ್. ಸಂಶಿ ಹಾಗೂ ರಾಜೇಶ್ ವಿ. ಬಳ್ಳಾರಿ ಉಪಸ್ಥಿತರಿದ್ದರು.

ವಿಜೇತರ ಪಟ್ಟಿ

ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ವಿಜೇತರಾದವರು ಮತ್ತು ರನ್ನರ್ ಅಪ್‌ಗಳ ವಿವರ ಈ ಕೆಳಗಿನಂತಿದೆ:

U-7 ಓಪನ್ ಸಿಂಗಲ್ಸ್

1. ಚಂದನ್ (ವಿಜೇತರು) – ಶಿರಸಿ

2. ಶ್ರೇಯಸ್ ನವಲಗುಂದ (ರನ್ನರ್ ಅಪ್) – ಧಾರವಾಡ

U-9 ಓಪನ್ ಸಿಂಗಲ್ಸ್

1. ಜಯಂತ್.ಜಿ.ಎಮ್ (ವಿಜೇತರು) – ಶಿರಸಿ

2. ವೀರೆನ್ ರಾಥೋಡ್ (ರನ್ನರ್ ಅಪ್) – ಹುಬ್ಬಳ್ಳಿ

U-11 ಬಾಲಕರ ಸಿಂಗಲ್ಸ್

1. ಜೈವರ್ಧನ.ಕೆ (ವಿಜೇತರು) – ಹುಬ್ಬಳ್ಳಿ

2. ಪ್ರಣೀತ್.ಹೆಗಡೆ (ರನ್ನರ್ ಅಪ್) – ಶಿರಸಿ

U-11 ಬಾಲಕಿಯರ ಸಿಂಗಲ್ಸ್

1. ಎಮ್. ಮೆಹೆತಾಬೆಲ್ (ವಿಜೇತರು) – ಹುಬ್ಬಳ್ಳಿ

2. ಕೃತಿಕಾ.ಸುಣಗಾರ್ (ರನ್ನರ್ ಅಪ್) – ಹುಬ್ಬಳ್ಳಿ

U-13 ಬಾಲಕರ ಸಿಂಗಲ್ಸ್

1. ಶೌರ್ಯ ಬಿ.ಎಸ್ (ವಿಜೇತರು) – ಮುಂಡಗೋಡ

2. ಸೂರ್ಯತೇಜ್ ರೆಡ್ಡಿ (ರನ್ನರ್ ಅಪ್)

U-13 ಬಾಲಕಿಯರ ಸಿಂಗಲ್ಸ್

1. ಎಮ್. ಮೆಹೆತಾಬೆಲ್ (ವಿಜೇತರು) – ಹುಬ್ಬಳ್ಳಿ

2. ಕೃತಿಕಾ.ಸುಣಗಾರ್ (ರನ್ನರ್ ಅಪ್) – ಹುಬ್ಬಳ್ಳಿ

U-15 ಬಾಲಕರ ಸಿಂಗಲ್ಸ್

1. ಅಬ್ಬಾಸ್ ದಾಸ್ (ವಿಜೇತರು) – ತೋರಣಗಲ್ಲು

2. ಶೌರ್ಯ ಬಿ.ಎಸ್ (ರನ್ನರ್ ಅಪ್) – ಮುಂಡಗೋಡ

U-15 ಬಾಲಕಿಯರ ಸಿಂಗಲ್ಸ್

1. ಎಮ್. ಮೆಹೆತಾಬೆಲ್ (ವಿಜೇತರು) – ಹುಬ್ಬಳ್ಳಿ

2. ತನ್ವಿ.ಹಿತ್ತಲಮನಿ (ರನ್ನರ್ ಅಪ್) – ಹುಬ್ಬಳ್ಳಿ

U-17 ಬಾಲಕರ ಸಿಂಗಲ್ಸ್

1. ರಜತ್ ಸಿದ್ದ್ರಾಮಶೆಟ್ಟರ್ (ವಿಜೇತರು) – ಹುಬ್ಬಳ್ಳಿ

2. ಪ್ರಥಮ್ ಹೆಗಡೆ (ರನ್ನರ್ ಅಪ್) – ಹುಬ್ಬಳ್ಳಿ

U-17 ಬಾಲಕಿಯರ ಸಿಂಗಲ್ಸ್

1. ಸಮಂತ.ಎಸ್ (ವಿಜೇತರು) – ಹುಬ್ಬಳ್ಳಿ

2. ತನ್ವಿ.ಹಿತ್ತಲಮನಿ (ರನ್ನರ್ ಅಪ್) – ಹುಬ್ಬಳ್ಳಿ

ಸ್ಥಳೀಯ ಆಟಗಾರರ ಮಿಂಚು

ಈ ಪಂದ್ಯಾವಳಿಯಲ್ಲಿ ನವೀನ್ ಪಾರ್ಕ್‌ನ ಸಂಶಿ ಸ್ಪೋರ್ಟ್ಸ್ ಅಕಾಡೆಮಿಯ ಕ್ರೀಡಾಪಟುಗಳು ಅತ್ಯಧಿಕ ಪ್ರಶಸ್ತಿಗಳನ್ನು ಗಳಿಸಿರುವುದು ಶ್ಲಾಘನೀಯ. ಅದರಲ್ಲೂ, ಎಮ್. ಮೆಹೆತಾಬೆಲ್ U-11, U-13, ಹಾಗೂ U-15 ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿ ಗಮನ ಸೆಳೆದರು.

Edited By : Vijay Kumar
Kshetra Samachara

Kshetra Samachara

03/02/2026 10:35 am

Cinque Terre

19.08 K

Cinque Terre

0

ಸಂಬಂಧಿತ ಸುದ್ದಿ