ಹುಬ್ಬಳ್ಳಿ: ಟ್ರಾಫಿಕ್ ಸಮಸ್ಯೆಯಲ್ಲಿ ಹುಬ್ಬಳ್ಳಿಯು ಬೆಂಗಳೂರನ್ನು ಹಿಂದಿಕ್ಕುತ್ತಿದೆ. ಫ್ಲೈಓವರ್ ಕಾಮಗಾರಿಯಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ಆಂಬ್ಯುಲೆನ್ಸ್ ದಾರಿ ಸಿಗದೇ ಸುಮಾರು ಸಮಯ ಟ್ರಾಫಿಕ್ ನಲ್ಲಿಯೇ ಪರದಾಡಿದ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿಯೇ ನಡೆದಿದೆ.
ಅಂಬೇಡ್ಕರ್ ವೃತ್ತದಿಂದ ಚನ್ನಮ್ಮ ವೃತ್ತದ ಕಡೆಗೆ ಸಂಚರಿಸುವ ಮಾರ್ಗ ಮಧ್ಯದಲ್ಲಿಯೇ ಆಂಬ್ಯುಲೆನ್ಸ್ ದಾರಿ ಸಿಗದೇ ಸುಮಾರು ಹೊತ್ತು ಪರದಾಡಿದ್ದು, ಯಾವುದೇ ಒಬ್ಬ ಸಂಚಾರಿ ಪೊಲೀಸರು ಇಲ್ಲದೇ ಇರುವ ಕಾರಣ ಆಂಬ್ಯುಲೆನ್ಸ್ ದಾರಿ ಸಿಗದೇ ಪರದಾಡಿದ್ದು, ಟ್ರಾಫಿಕ್ ಸಮಸ್ಯೆಗೆ ಜನರು ಹಿಡಿಶಾಪ ಹಾಕಿದ್ದಾರೆ.
ಇನ್ನೂ ಸುಮಾರು ಒಂದು ಕಿಲೋಮೀಟರ್ ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಆಗಿದ್ದು, ನಿರ್ವಹಣೆ ಮಾಡಬೇಕಿದ್ದ ಸಂಚಾರಿ ಪೊಲೀಸರು ಇಲ್ಲದೇ ಇರುವುದರಿಂದ ಆಂಬ್ಯುಲೆನ್ಸ್ ಪರದಾಡಿದ್ದು, ನಿಜಕ್ಕೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/01/2026 07:40 pm
LOADING...