ಹುಬ್ಬಳ್ಳಿ: ಈ ಕಳ್ಳರು ಮನೆಗಳ್ಳತನ, ದರೋಡೆ ಮಾಡುವುದು ಒಂದು ಕಡೆಯಾದ್ರೆ, ಈ ಖದೀಮರು ಅನ್ನದಾತ ಬೆಳೆದ ಬೆಳೆಗೆ ಕಣ್ಣು ಹಾಕಿದ್ದಾರೆ. ರೈತ ಬೆಳೆದ ಬೆಳೆಗಳಿಗೆ ಯಾವಾಗ ಬಂಗಾರದ ಬೆಲೆ ಬರುತ್ತೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕಳೆದ ವರ್ಷ ಮೆಣಸಿನಕಾಯಿ ಬೆಲೆ ಕುಸಿತಗೊಂಡು ರೈತರು ಕಂಗಾಲಾಗಿದ್ದರು. ಆದ್ರೆ ಪ್ರಸಕ್ತ ವರ್ಷ ಕಡಿಮೆ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಇದೀಗ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದು, ಬೆಳೆ ರಕ್ಷಣೆಯೇ ರೈತರಿಗೆ ಸವಾಲಾಗಿದೆ. ಕಳ್ಳರ ಕಾಟಕ್ಕೆ ಸಿಸಿ ಕ್ಯಾಮೆರಾ ಹಾಕಿದ್ದಾರೆ.
ಹೌದು,,, ಟೊಮೇಟೊ, ಈರುಳ್ಳಿ ಬೆಲೆ ಗಗನಕ್ಕೇರಿದಾಗ ಖದೀಮರು ಕತ್ತಲಾಗುವುದಕ್ಕಾಗಿಯೇ ಕಾದು ಬೆಳೆಯನ್ನು ಕದ್ದು ಪರಾರಿಯಾಗುತ್ತಿದ್ದರು. ಹೀಗಾಗಿ ರೈತರು ತಮ್ಮ ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಸುತ್ತಿದ್ದರು. ಆದರೆ ಈಗ ಮೆಣಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾಗಿದ್ದು ಬೆಳೆಯನ್ನು ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜಮೀನಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯ ರೈತರು ಮೆಣಿಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾದ ಹಿನ್ನಲೆಯಲ್ಲಿ ಅವರು ಬೆಳೆಗೆ ಸಿಸಿ ಕ್ಯಾಮೆರಾದ ಹದ್ದಿನ ಕಣ್ಣಿಟ್ಟಿದ್ದು, ಸೋಲಾರ್ ಮೂಲಕ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಮೆಣಸಿನಕಾಯಿಗೆ 70 ರಿಂದ 80 ಸಾವಿರ ರೂಪಾಯಿ ಇದೆ. ಹೀಗಾಗಿ ಮೆಣಸಿನಕಾಯಿ ಕಳ್ಳತನ ಮಾಡುವವರು ಜಾಸ್ತಿಯಾಗಿದ್ದಾರೆ. ಅದಕ್ಕಾಗಿ ರೈತರು ಸಿಸಿ ಕ್ಯಾಮೆರಾ ಅಳವಡಿಸಿ ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/02/2026 03:17 pm
LOADING...