ಧಾರವಾಡ: ಮೊನ್ನೆಯಷ್ಟೇ ತನ್ನ ಪ್ರಿಯಕರನಿಂದ ಕೊಲೆಗೀಡಾದ ಝಾಕಿಯಾ ಹತ್ಯೆ ಖಂಡಿಸಿ ಧಾರವಾಡದಲ್ಲಿ ಮುಸ್ಲಿಂ ಸಮಾಜದ ಮುಖಂಡರು ಹಾಗೂ ಯುವಕರು ಧಾರವಾಡದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿದರು.
ಧಾರವಾಡದ ಕಲಾಭವನದಿಂದ ಕ್ಯಾಂಡಲ್ ಮಾರ್ಚ್ ನಡೆಸಿದ ಮುಖಂಡರು ಅಲ್ಲಿಂದ ಸುಭಾಷ ರಸ್ತೆ ಮೂಲಕ ಹಾದು ಜ್ಯುಬಿಲಿ ವೃತ್ತದವರೆಗೂ ಮೆರವಣಿಗೆ ನಡೆಸಿದರು.
ಜಸ್ಟಿಸ್ ಫಾರ್ ಝಾಕಿಯಾ ಎಂದು ಫಲಕ ಹಿಡಿದು ಜ್ಯುಬಿಲಿ ವೃತ್ತದಿಂದ ಅಂಜುಮನ್ ಸಂಸ್ಥೆವರೆಗೂ ಸಾಗಿದರು. ಕೊಲೆ ಮಾಡಿದ ಸಾಬೀರ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮುಸ್ಲಿಂ ಸಮಾಜದ ಮುಖಂಡರು ಹಾಗೂ ಯುವಕರು ಈ ಸಂದರ್ಭದಲ್ಲಿ ಆಗ್ರಹಿಸಿದರು.
Kshetra Samachara
23/01/2026 08:21 pm
LOADING...