ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೋಟೀನ್ ಬೇಕೆಂದು ಪೆಡಿಗ್ರಿ ತಿಂದ ಯುವಕ: ವಿಡಿಯೋ ವೈರಲ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್ ಕ್ರೇಜ್ ಹೆಚ್ಚಾಗಿದ್ದು, ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಅಥವಾ ತೂಕ ಇಳಿಸಿಕೊಳ್ಳಲು ಅನೇಕರು ಜಿಮ್‌ಗಳ ಕಡೆ ಮುಖ ಮಾಡುತ್ತಿದ್ದಾರೆ. ಆದರೆ, ಈ ಫಿಟ್‌ನೆಸ್ ಗೀಳು ಕೆಲವೊಮ್ಮೆ ಅಪಾಯಕಾರಿ ಹಂತ ತಲುಪುತ್ತದೆ ಎಂಬುದಕ್ಕೆ ಇತ್ತೀಚಿನ ಘಟನೆಯೊಂದು ಸಾಕ್ಷಿಯಾಗಿದೆ. ವ್ಯಾಯಾಮದ ವೇಳೆ ಪ್ರೋಟೀನ್ ಬೂಸ್ಟರ್‌ಗಾಗಿ ಯುವಕನೊಬ್ಬ ನಾಯಿ ಆಹಾರವನ್ನು ಸೇವಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಯುವಜನತೆ ತಮ್ಮ ಗುರಿ ತಲುಪಲು ಯಾವುದೇ ಸಾಹಸಕ್ಕೂ ಸಿದ್ಧರಿರುತ್ತಾರೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿಕೊಟ್ಟಿದೆ.

ಜಿಮ್ ವರ್ಕೌಟ್‌ಗಳು ದೈಹಿಕ ಚಟುವಟಿಕೆ ಮತ್ತು ದೇಹಕ್ಕೆ ಚೈತನ್ಯ ನೀಡಿದರೂ, ಕೆಲವು ಯುವಕರು ಅನುಸರಿಸುವ ಕ್ರಮಗಳು ಪ್ರಾಣಕ್ಕೆ ಹಾನಿಕಾರಕವಾಗಬಹುದು. ಈ ವೈರಲ್ ವಿಡಿಯೋದಲ್ಲಿ, ಯುವಕನೊಬ್ಬ ಜಿಮ್‌ನಲ್ಲಿ ಕಾಲಿಗೆ ಸಂಬಂಧಿಸಿದ ವ್ಯಾಯಾಮ ಮಾಡುತ್ತಿರುವುದು ಕಂಡುಬರುತ್ತದೆ. ವ್ಯಾಯಾಮದ ನಡುವೆ ವಿರಾಮ ತೆಗೆದುಕೊಂಡ ಆತ, ತನ್ನ ಪಕ್ಕದಲ್ಲೇ ಇಟ್ಟಿದ್ದ 'ಪೆಡಿಗ್ರಿ' ನಾಯಿ ಆಹಾರದ ಪ್ಯಾಕೆಟ್‌ನಿಂದ ಸ್ವಲ್ಪ ತೆಗೆದುಕೊಂಡು ನೇರವಾಗಿ ಬಾಯಿಗೆ ಹಾಕಿಕೊಳ್ಳುತ್ತಾನೆ.

'ಡಾ. ಸಿಜೆಡ್' ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಜಿಮ್‌ಗಳಲ್ಲಿ ಇಂತಹ ಯಾವೆಲ್ಲಾ ಅಪಾಯಕಾರಿ ಚಟುವಟಿಕೆಗಳು ನಡೆಯುತ್ತಿವೆ ಮತ್ತು ಜನರು ಬಳಸುತ್ತಿರುವ ಉತ್ಪನ್ನಗಳು ನಿಜಕ್ಕೂ ಅವರ ಆರೋಗ್ಯಕ್ಕೆ ಪೂರಕವೇ ಎಂಬ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಕಂಡ ನೆಟ್ಟಿಗರು ಯುವಕನ ಈ ಕೃತ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ. "ಸಾಮಾನ್ಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರದಿಂದಲೇ ಸಾಕಷ್ಟು ಪ್ರೋಟೀನ್ ಲಭ್ಯವಿದೆ. ಮೊಟ್ಟೆ, ಚಿಕನ್‌ನಂತಹ ಆಹಾರದಿಂದಲೂ ಪ್ರೋಟೀನ್ ಪಡೆಯಬಹುದು. ಇಂತಹ ನಾಯಿ ಆಹಾರ ತಿನ್ನುವುದನ್ನು ನಿಲ್ಲಿಸಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಇದು ನಾಯಿಗಳಿಗಾಗಿ ರೂಪಿಸಲಾಗಿದೆ, ಮನುಷ್ಯರಿಗಾಗಿ ಅಲ್ಲ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ, ನಾಯಿ ಆಹಾರದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿದ್ದರೂ, ಅದು ಮನುಷ್ಯರ ದೇಹಕ್ಕೆ ಪೂರಕವಲ್ಲ ಮತ್ತು ಆರೋಗ್ಯಕ್ಕೆ ಹಾನಿಕರವಾಗಬಹುದು ಎಂದು ಎಚ್ಚರಿಸಿದ್ದಾರೆ.

Edited By :
PublicNext

PublicNext

21/01/2026 08:39 pm

Cinque Terre

32.49 K

Cinque Terre

0

ಸಂಬಂಧಿತ ಸುದ್ದಿ