ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ; ಅನಂತಮೂರ್ತಿ ಹೆಗಡೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಕಳೆದ ಕೆಲವು ದಿನಗಳಿಂದ ಹಾವೇರಿ ಜಿಲ್ಲೆಗೆ ಬೇಡ್ತಿ-ಅಘನಾಶಿನಿ ಕುಡಿಯುವ ನೀರಿನ ಯೋಜನೆ ಸಲುವಾಗಿ ಹಲವಾರ ಚರ್ಚೆಗಳು ಮತ್ತು ಹೋರಾಟಗಳು ಆಯಾ ಜಿಲ್ಲೆಯಲ್ಲಿ ನಡೆಯುತ್ತಿವೆ. ಹಾವೇರಿ ಜಿಲ್ಲೆಯವರು ನದಿ ಜೋಡಣೆ ಯೋಜನೆ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯವರು ಈ ಯೋಜನೆಯನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ನಗರದ ಮಧುವನ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ಬೇಡ್ತಿ-ಅಘನಾಶಿನಿ ಲಿಂಕ್ ಪ್ರಾಜೆಕ್ಟ್, ಇದು ನೀರಾವರಿ ಹಾಗೂ ಕೈಗಾರಿಕೆ ದೃಷ್ಟಿಯಿಂದ ನೀರು ಕೇಳುತ್ತಿದ್ದಾರೆ. ಇದು ಖಂಡಿತಾ ಸಾಧ್ಯವಿಲ್ಲ. ಈಗಾಗಲೇ ಬಯಲುಸೀಮೆ ಪ್ರದೇಶದಲ್ಲಿ ಸಾಕಷ್ಟು ಇರಿಗೇಶನ್ ಯೋಜನೆಗಳು ಜಾರಿಯಾಗಿವೆ. ಆದರೆ, ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಇರಿಗೇಶನ್ ಹೊಂದಿಲ್ಲ. ಆ ಕಾರಣದಿಂದ ಜಿಲ್ಲೆಯ ಅಸ್ಮಿತೆ ದೃಷ್ಟಿಯಿಂದ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಿ, ಎಲ್ಲರೂ ಈ‌ ಹೋರಾಟಕ್ಜೆ ಕೈ ಜೋಡಿಸಬೇಕು ಎಂದು ಹೇಳಿದರು.

Edited By :
PublicNext

PublicNext

22/01/2026 07:29 am

Cinque Terre

15.32 K

Cinque Terre

0

ಸಂಬಂಧಿತ ಸುದ್ದಿ