ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: 900ಕಿಮೀ ಕ್ರಮಿಸಿ ಸ್ವಂತ ಗೂಡು ಸೇರಿ ಅಚ್ಚರಿ ಮೂಡಿಸಿದ ಪಾರಿವಾಳ

ಚಿತ್ರದುರ್ಗ: ಪಾರಿವಾಳಗಳು ಅದ್ಭುತವಾದ ನ್ಯಾವಿಗೇಷನ್ (ದಿಕ್ಕು ಪತ್ತೆ), ದೀರ್ಘಾವಧಿಯ ನೆನಪಿನ ಶಕ್ತಿ ಮತ್ತು ತೀಕ್ಷ್ಣವಾದ ದೃಷ್ಟಿ ಸಾಮರ್ಥ್ಯವನ್ನು ಹೊಂದಿವೆ. ಕಾಂತೀಯ ಕ್ಷೇತ್ರಗಳನ್ನು ಬಳಸಿಕೊಂಡು ಸಾವಿರಾರು ಕಿಲೋಮೀಟರ್ ದೂರದಿಂದಲೂ ತಮ್ಮ ಗೂಡಿಗೆ ಮರಳುವ ಸಾಮರ್ಥ್ಯ ಇವುಗಳ ವಿಶೇಷ ಗ್ರಹಿಕೆಯಾಗಿದೆ.ಇವು ನಿಗೂಢ ಸ್ಥಳಗಳಿಂದಲೂ ದಾರಿ ಕಂಡುಕೊಂಡು ಮರಳಿ ತಮ್ಮ ಸ್ವಂತ ಸ್ಥಾನಕ್ಕೆ ಮರಳಿ ಬರಬಲ್ಲ ಚಾಕಚಕ್ಯತೆ ಹೊಂದಿರುವುದಕ್ಕೆ ಇಲ್ಲೊಂದು ನೈಜ ನಿದರ್ಶನ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಳವಾರಹಳ್ಳಿ ಗ್ರಾಮದ ರಾಜು ಎಂಬುವರು ತನ್ನೂರಿನಿಂದ ಶಬರಿಮಲೆಗೆ ತೆರಳಿ ಸ್ವಾಮಿಗಳಿಗೆ ತಾವು ಸಾಕಿದ್ದ ಒಂದು ಪಾರಿವಾಳ ಹಾಗೂ ಇದೇ ಗ್ರಾಮಕ್ಕೆ ಸೇರಿದ ಓಬಣ್ಣ ಎನ್ನುವವರಿಗೆ ಸೇರಿದ ಇನ್ನೊಂದು ಪಾರಿವಾಳ ಸೇರಿದಂತೆ ಒಟ್ಟು ಎರಡು ಪಾರಿವಾಳಗಳನ್ನು ಕೊಟ್ಟು ಹಾರಿಬಿಡಲು ಹೇಳಿದ್ದರು.ಇದೀಗ ಬರೋಬ್ಬರಿ 21 ದಿನಗಳ ಬಳಿಕ ರಾಜು ಸಾಕಿದ್ದ ಮದಕರಿ ಹೆಸರಿನ ಪಾರಿವಾಳ ಮರಳಿ ಗೂಡಿಗೆ ತಲುಪಿದ್ದು, ಮಾಲೀಕ ಸೇರಿದಂತೆ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೊಳಕಾಲ್ಮೂರು ತಾಲೂಕಿನ ತಳವಾರಹಳ್ಳಿ ಗ್ರಾಮದ ರಾಜುಗೆ ಪಾರಿವಾಳ ಸಾಕುವ ಹವ್ಯಾಸವಿದ್ದು ತಾನು ಸಾಕಿದ ಪಾರಿವಾಳದ ತೀಕ್ಷ್ಣತೆ, ಚಲನಶೀಲ ಅಳೆಯಲು ಶಬರಿಮಲೆಗೆ ದೇವರ ದರ್ಶನ ಪಡೆಯಲು ತೆರಳಿದ್ದ ಅಯ್ಯಪ್ಪ ಮಾಲಾಧಾರಿಗಳಿಗೆ ತಾನು ಸಾಕಿರುವ ಪಾರಿವಾಳ ಕೊಟ್ಟು ಅಲ್ಲಿಂದ ಹಾರಿ ಬಿಡುವಂತೆ ಹೇಳಿದ್ದ, ಪ್ರೀತಿಯಿಂದ ಸಾಕಿರುವ ಈ ಪಾರಿವಾಳಕ್ಕೆ "ಮದಕರಿ"ಎನ್ನುವ ಹೆಸರಿಟ್ಟಿದ್ದ ಪಾರಿವಾಳ ಹಾಗೂ ಓಬಣ್ಣಗೆ ಸೇರಿದ ಪಾರಿವಾಳವನ್ನು ಸ್ವಾಮಿಗಳು ಬಾಕ್ಸ್​ನಲ್ಲಿ ತೆಗೆದುಕೊಂಡು ಹೋಗಿ ಡಿಸೆಂಬರ್ 31ರ ಮಧ್ಯಾಹ್ನ ವೇಳೆ ಶಬರಿಮಲೆಯಿಂದ ಒಮ್ಮೆಲೇ ಎರಡು ಪಾರಿವಾಳಗಳನ್ನು ಹಾರಿ ಬಿಟ್ಟಿದ್ದರು.900ಕಿಮೀ ಸುಧೀರ್ಘ ಹಾರಾಟ ನಡೆಸಿದ ರಾಜುಗೆ ಸೇರಿದ ಪಾರಿವಾಳ (ಮದಕರಿ)ಜನವರಿ 21ರ ಮಧ್ಯಾಹ್ನ 1:30ರ ವೇಳೆಗೆ ಮರಳಿ ಬಂದು ಸ್ವಂತ ಗೂಡಿಗೆ ಸೇರಿ ಅಚ್ಚರಿ ಉಂಟು ಮಾಡಿದೆ.ಆದರೆ ಓಬಣ್ಣಗೆ ಸೇರಿದ ಪಾರಿವಾಳ ಮಾತ್ರ ಇನ್ನೂ ಊರು ಸೇರಿಲ್ಲ.

Edited By : Vinayak Patil
PublicNext

PublicNext

22/01/2026 08:08 pm

Cinque Terre

29.69 K

Cinque Terre

0