ಚಳ್ಳಕೆರೆ: ಹವಾಮಾನ ವೈಪರೀತ್ಯಕ್ಕೆ ಜಗತ್ತು ಎದುರಾಗುತ್ತಿರುವ ಹೊತ್ತಿನಲ್ಲಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸುವುದು ಅತ್ಯಗತ್ಯ. ಇಂತಹ ಪ್ರಕೃತಿ ಪಾಠವನ್ನು ಚಳ್ಳಕೆರೆ ನಗರದ ದೊಡ್ಡೇರಿ ರಸ್ತೆಯಲ್ಲಿರುವ ಪಿ.ಎಂ.ಶ್ರೀ ಆದರ್ಶ ವಿದ್ಯಾಲಯದಲ್ಲಿ
ಕಾಣಬಹುದಾಗಿದೆ. ಶಾಲೆ ಮುಂಭಾಗ ಹಾಗೂ ಅಕ್ಕ ಪಕ್ಕದಲ್ಲಿ ಇರುವ ಹಚ್ಚ ಹಸಿರಿನ ಸೊಬಗಿನ ಮರಗಳ ಕಲಿಕೆಯ ಆನಂದವನ್ನು ಮಕ್ಕಳು ಅನುಭವಿಸುತ್ತಿದ್ದಾರೆ.
ಪ್ರತಿನಿತ್ಯದ ಹಕ್ಕಿಗಳ ಕಲರವ, ತರಹೇವಾರಿ ನೂರಾರು ಮರಗಳ ನೆರಳಿನಲ್ಲಿ ಇಲ್ಲಿನ ಮಕ್ಕಳು ಪ್ರಕೃತಿಯೊಂದಿಗೆ ಬೆರೆತು ಶಿಕ್ಷಣ ಕಲಿಯುತ್ತಿದ್ದಾರೆ. ಶಿಕ್ಷಣ ಪ್ರೇಮಿ ಶಾಸಕ ಟಿ.ರಘುಮೂರ್ತಿ ಇವರ ಆಶಯದಂತೆ ಶಾಲೆ ಪ್ರಾರಂಭದ ದಿನಗಳಲ್ಲಿ ಶಾಲೆ ಸುತ್ತಮುತ್ತಲಿನ ಖಾಲಿ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ ಹಿನ್ನೆಲೆಯಲ್ಲಿ ಇಂದು ಈ ಶಾಲೆಯ ಆವರಣದಲ್ಲಿ ಹಚ್ಚ ಹಸಿರಿನ ಮರಗಳ ಸಾಲು ಶಾಲೆ ವಾತಾವರಣವನ್ನೇ ಬದಲು ಮಾಡಿದೆ.
ಶಾಲೆಯ ಆವರಣದಲ್ಲಿ ಬೇವು,ಅರಳಿ,ಹೊಂಗೆ,ಗೋಣಿ,ನೆರಳೆ,ಆಲ ಸೇರಿದಂತೆ ವಿವಿಧ ಔಷಧಿ ಬಳಕೆಯ ಮರಗಳು ಹಾಗೂ ಹಣ್ಣಿನ ಮರಗಳು ಇರುವುದರಿಂದ ಹಕ್ಕಿಗಳ ಕಲರವ ಇಂಪಾಗಿರುತ್ತದೆ. ಒಂದು ಬೋರ್ ವೆಲ್ ನಿಂದ ಬರುವ ನೀರನ್ನು ಬಳಕೆ ಮಾಡಿಕೊಂಡು ಹಚ್ಚ ಹಸಿರಿನ ವನವನ್ನಾಗಿ ಮಾರ್ಪಾಟು ಮಾಡಲಾಗಿದ್ದು, ಶಾಲೆಗೆ ಇನ್ನು 2 ಕಡೆ ಕಾಂಪೌಂಡ್ ಗೋಡೆ ಹಾಗೂ ಎಲ್ಲಾ ಮರಗಳಿಗೂ ಹನಿ ತುಂತುರು ವ್ಯವಸ್ಥೆ ಕಲ್ಪಿಸಿದರೆ ಮರಗಳ ಸಂರಕ್ಷಣೆಯ ಜೊತೆಗೆ ಶಾಲೆಯ ಚಿತ್ರಣವೇ ಬದಲಾವಣೆಯಾಗುತ್ತದೆ ಎನ್ನುತ್ತಾರೆ ಪಿಎಂಶ್ರೀ ಆದರ್ಶ ವಿದ್ಯಾಲಯ ಮುಖ್ಯ ಶಿಕ್ಷಕ ಅಶೋಕ ರೆಡ್ಡಿ.
Kshetra Samachara
30/01/2026 03:55 pm
LOADING...