ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಸಂಭ್ರಮದ ಎತ್ತಿನಗಾಡಿ ಯಾತ್ರೆ - ಅಂತರಘಟ್ಟೆ ಜಾತ್ರೆಗೆ ಹರಿದುಬಂದ ಭಕ್ತಸಾಗರ!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಸಂಭ್ರಮದಿಂದ ಎತ್ತಿನಗಾಡಿ ಏರಿ ಅಂತರಘಟ್ಟೆ ಜಾತ್ರೆಗೆ ಸಾಗಿದರು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಅಂತರಘಟ್ಟೆಯಲ್ಲಿ ನೆಲೆಸಿರುವ ದುರ್ಗಾಂಬಾ ದೇವಿಯ ರಥೋತ್ಸವವು ಪ್ರತಿವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದರಂತೆ, ಹೊಸದುರ್ಗ ತಾಲ್ಲೂಕಿನ ಮಂಟೇನಹಳ್ಳಿ, ಗುತ್ತಿಕಟ್ಟೆ, ಮಧುರೆ, ಕೊಂಡಾಪುರ, ಕಬ್ಬಿನಕೆರೆ, ಬುರುಡೇಕಟ್ಟೆ, ನೀರಗುಂದ, ಐಲಾಪುರ, ಸಾಣೇಹಳ್ಳಿ, ಶ್ರೀರಂಗಾಪುರ ಸೇರಿದಂತೆ ಹಲವು ಗ್ರಾಮಗಳಿಂದ ನೂರಾರು ಭಕ್ತರು ಹತ್ತಾರು ಎತ್ತಿನಗಾಡಿಗಳಲ್ಲಿ ದೇವಿ ಜಾತ್ರೆಗೆ ತೆರಳಿದರು.

ಜಾತ್ರೆ ಪೂರ್ವ ಸಿದ್ಧತೆ ಮತ್ತು ಸಂಪ್ರದಾಯಗಳು

ಅಂತರಘಟ್ಟೆ ಜಾತ್ರೆ ಕೇವಲ ಉತ್ಸವವಲ್ಲದೆ, ಹೊಸದುರ್ಗ ತಾಲ್ಲೂಕಿನಾದ್ಯಂತ ಒಂದು ದೊಡ್ಡ ಹಬ್ಬದಂತೆ ಆಚರಿಸಲಾಗುತ್ತದೆ. ರಥೋತ್ಸವಕ್ಕೂ ಮುನ್ನ ಮಂಗಳವಾರ ಅಥವಾ ಬುಧವಾರದಂದು ಬಾಡೂಟ (ಮಾಂಸಾಹಾರದ ಊಟ) ತಯಾರಿಸಿ, ಸಂಬಂಧಿಕರನ್ನು ಮನೆಗೆ ಆಹ್ವಾನಿಸಲಾಗುತ್ತದೆ. ನಂತರ, ಶುಕ್ರವಾರದಂದು ಮನೆಯಲ್ಲಿ ಸಿಹಿ ಖಾದ್ಯಗಳನ್ನು ತಯಾರಿಸಿ ಎಲ್ಲಾ ದೇವರುಗಳಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ಬಳಿಕ, ಗ್ರಾಮಸ್ಥರೆಲ್ಲರೂ ಒಗ್ಗೂಡಿ ಗ್ರಾಮದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಎತ್ತಿನಗಾಡಿಗಳಲ್ಲಿ ಜಾತ್ರೆಗೆ ಹೊರಡುತ್ತಾರೆ. ಶುಕ್ರವಾರದಿಂದ ಆರಂಭವಾಗುವ ಈ ಜಾತ್ರೆಯ ಪ್ರಯಾಣ, ಮಂಗಳವಾರದವರೆಗೂ ನಿರಂತರವಾಗಿ ಸಾಗುತ್ತಿರುತ್ತದೆ.

Edited By : PublicNext Desk
Kshetra Samachara

Kshetra Samachara

01/02/2026 08:26 pm

Cinque Terre

980

Cinque Terre

0

ಸಂಬಂಧಿತ ಸುದ್ದಿ