ಚಾಮರಾಜನಗರ : ಅಪಘಾತವಾಗಿ ಸಂಚಾರ ಠಾಣೆಗೆ ಬಂದಿದ್ದ ಬೈಕ್ ಅನ್ನು ರಿಲೀಸ್ ಮಾಡಿಕೊಡಲು ದ್ವಿ ಚಕ್ರ ವಾಹನ ಮಾಲೀಕನ ಬಳಿ 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹೆಡ್ ಕಾನ್ಸ್ ಟೇಬಲ್ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಠಾಣೆಯ ಮುಖ್ಯಪೇದೆ ಮಲ್ಲು ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯ ಪೊಲೀಸ್. ಇವರು ಹರದನಹಳ್ಳಿ ಪ್ರತಾಪ್ ಎಂಬವರ ಬೈಕ್
ಅನ್ನು ರಿಲೀಸ್ ಮಾಡಿಕೊಡಲು 3 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರಿಂದ ಶುಕ್ರವಾರ ಸಂಜೆ ಠಾಣೆಗೆ ದಾಳಿ ನಡೆಸಿದ ಪೊಲೀಸರು ಹಣದ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯಲ್ಲಿ ಡಿವೈಎಸ್ಪಿ ಗಜೇಂದ್ರಪ್ರಸಾದ್, ಇನ್ಸ್ ಪೆಕ್ಟರ್ ಗಿರೀಶ್ ಹಾಗೂ ಸಿಬ್ಬಂದಿ ಇದ್ದರು.
Kshetra Samachara
24/01/2026 05:07 pm
LOADING...