ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಅಭಯ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಪ್ರತಿಷ್ಠಾಪನೆ

ಆನೇಕಲ್: ಆನೇಕಲ್ ನ ಆಶ್ರಯ ಬಡಾವಣೆ ಸಮೀಪ ನೂತನವಾಗಿ ಅಭಯ ಶ್ರೀ ಆಂಜನೇಯ ಸ್ವಾಮಿಯ ದೇವಾಲಯ ನಿರ್ಮಿಸಿ ದೇವರ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ಆಶ್ರಯ ಬಡಾವಣೆಯಲ್ಲಿ ನೂರಾರು ಮನೆಗಳಿದ್ದು, ಜನರು ಪೂಜೆ ಪುನಸ್ಕಾರ ಮಾಡಲು ಯಾವುದೇ ದೇವಾಲಯವಿರಲಿಲ್ಲ. ಹೀಗಾಗಿ ಆಶ್ರಯ ಬಡಾವಣೆಯ ಎಲ್ಲಾ ನಿವಾಸಿಗಳ ಸಹಕಾರದೊಂದಿಗೆ ಅಭಯ ಶ್ರೀಆಂಜನೇಯ ಸ್ವಾಮಿ ದೇವಾಲಯ ನಿರ್ಮಿಸಿ ವಿಶೇಷ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳೊಂದಿಗೆ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಯಿತು.

ಈ ಕುರಿತು ಮಾತನಾಡಿದ ಸ್ಥಳೀಯರಾದ ಸುಂದರ್ ರಾಜ್, ಬಡಾವಣೆಯ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ಕಲ್ಲಿನ ಶ್ರೀ ಆಂಜನೇಯನಿಗೆ ಪೂಜೆ ಮಾಡಿಕೊಂಡು ಬರುತ್ತಿದ್ದರು. ಇಂದು ಬಡಾವಣೆಯಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಿ ಶ್ರೀ ಆಂಜನೇಯ ಸ್ವಾಮಿಯ ಕಲ್ಲಿನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ. ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡಿದ ಪ್ರತಿ ನಿವಾಸಿಗಳಿಗೂ ಧನ್ಯವಾದ ಸಲ್ಲಿಸಿದರು.

Edited By :
PublicNext

PublicNext

26/01/2026 08:59 am

Cinque Terre

12.79 K

Cinque Terre

0

ಸಂಬಂಧಿತ ಸುದ್ದಿ