ಶಿರಸಿ: ಶಿರಸಿಯ ಆರಾಧ್ಯ ದೇವತೆಯಾದ ಶ್ರೀ ಮಾರಿಕಾಂಬಾ ದೇವಿಗೆ ನೂತನವಾಗಿ ನಿರ್ಮಿಸಲಾದ ಪಲ್ಲಕ್ಕಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ವೇದಮಂತ್ರೋಚ್ಚಾರಣೆ ಹಾಗೂ ಮಂಗಳವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಮರ್ಪಣೆ ಮಾಡಲಾಯಿತು.
ನೂತನ ಪಲ್ಲಕ್ಕಿಯನ್ನು ಶಿಲ್ಪಕಲೆಯ ನಿಪುಣತೆಯಿಂದ ಪ್ರಶಾಂತ ಗುಡಿಗಾರ ಅವರು ಸಿದ್ಧಪಡಿಸಿದ್ದು, ಧಾರ್ಮಿಕ ವಿಧಿ ವಿಧಾನದಂತೆ ದೇವಾಲಯಕ್ಕೆ ಹಸ್ತಾಂತರಿಸಿದರು. ದೇವಸ್ಥಾನದ ವಿಶೇಷ ಉತ್ಸವದಲ್ಲಿ ಮತ್ತು ಪ್ರತಿ ನಿತ್ಯ ನಡೆಯುವ ದೇವಿಯ ಪಲ್ಲಕ್ಕಿ ಉತ್ಸವ ಸೇವೆಗಳಿಗೆ ಈ ಪಲ್ಲಕ್ಕಿಯನ್ನು ಉಪಯೋಗಿಸಲಾಗುವುದು.
ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಜಿ. ನಾಯ್ಕ, ಉಪಾಧ್ಯಕ್ಷರಾದ ಸುದೇಶ ಜಿ. ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಎಸ್. ಹಂದ್ರಾಳ, ವತ್ಸಲಾ ಪಿ. ಹೆಗಡೆ, ಶಿವಾನಂದ ಶೆಟ್ಟಿ, ಬಾಬುದಾರ ಮುಖ್ಯಸ್ಥರಾದ ಜಗದೀಶ ಎನ್. ಗೌಡ, ರಮೇಶ ದಬ್ಬೆ, ಜಗದೀಶ ಕುರುಬರ, ಬಸವರಾಜ ಚಕ್ರಸಾಲಿ ಹಾಗೂ ಬಾಬುದಾರ ಸಹಾಯಕರು, ಅರ್ಚಕರು, ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
PublicNext
26/01/2026 10:00 pm
LOADING...