ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊನ್ನಾವರ: ಹಣದ ವಿಚಾರಕ್ಕೆ ಇಡಗುಂಜಿ ದೇವಸ್ಥಾನದಲ್ಲಿ ಅರ್ಚಕರ ಕಿತ್ತಾಟ

ಹೊನ್ನಾವರ: ತಾಲ್ಲೂಕಿನ ಶ್ರೀ ಇಡಗುಂಜಿ ದೇವಸ್ಥಾನದ ಅರ್ಚಕರ ಕುಟುಂಬದ ಸಹೋದರರು ದೇವಸ್ಥಾನದ ಒಳಗಡೆ ಜಗಳವಾಡುತ್ತಾ ಕೈ ಕೈ ಮಿಲಾಯಿಸಿಕೊಂಡ ವಿಡಿಯೋ ಚಿತ್ರಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಹೊನ್ನಾವರ ತಾಲ್ಲೂಕಿನ ಮೇಲಿನ ಇಡಗುಂಜಿ ಗ್ರಾಮದಲ್ಲಿರುವ ಇಡಗುಂಜಿ ದೇವಾಲಯದ ಆಡಳಿತ ಮತ್ತು ಹಣಕಾಸಿನ ಬಗ್ಗೆ ದೇವಾಲಯದ ಟ್ರಸ್ಟಿಗಳು ಮತ್ತು ಅರ್ಚಕ ಕುಟುಂಬದ ನಡುವೆ ಭಿನ್ನಾಭಿಪ್ರಾಯ ಉಂಟಾಗಿ 07-10-2013 ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಸೂಚನೆಗಳ ಪ್ರಕಾರ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಉತ್ತರ ಕನ್ನಡ ಜಿಲ್ಲಾ ನ್ಯಾಯಾಧೀಶರನ್ನು ಶ್ರೀ ಇಡಗುಂಜಿ ದೇವಾಲಯದ ‘ರಿಸೀವರ್’ ಆಗಿ ನೇಮಿಸಲಾಗಿದೆ.

ಅಲ್ಲಿಂದ ನಾಲ್ಕು ಅರ್ಚಕ ಕುಟುಂಬಗಳು ಸರದಿ ಆಧಾರದ ಮೇಲೆ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ. ಇದರಲ್ಲಿ, ಆಡಳಿತಾಧಿಕಾರಿಯವರು ಧಾರ್ಮಿಕ ಪೂಜೆಯ ಕುರಿತು ನೀಡುವ ಹಣದಲ್ಲಿ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಕುಟುಂಬದ ಐದು ಮಕ್ಕಳ ನಡುವೆ ಇತ್ತೀಚಿನ ದಿನಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಕಳೆದ ತಿಂಗಳು, ಈ ಕುಟುಂಬವು ಪಾಳಿಯ ಸಮಯದಲ್ಲಿ ದೇವಾಲಯದಲ್ಲಿ ಜಗಳವಾಡುತ್ತಿದ್ದಾಗ, ದೇವಾಲಯಕ್ಕೆ ಭೇಟಿ ನೀಡಿದ ಭಕ್ತರಲ್ಲಿ ಒಬ್ಬರು ವೀಡಿಯೊ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ.

Edited By :
PublicNext

PublicNext

28/01/2026 06:32 pm

Cinque Terre

28 K

Cinque Terre

1

ಸಂಬಂಧಿತ ಸುದ್ದಿ