ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಟ್ಯಾಗೋರ್ ಜಡಲ ತೀರ ಮುಟ್ಟಿದರೆ ಹೋರಾಟ ಖಂಡಿತ - ಗಣಪತಿ ಮಾಂಗ್ರೆ

ಕಾರವಾರ: ನಗರದ ಟ್ಯಾಗೋರ್ ಕಡಲ ತೀರಕ್ಕೂ ಬಂದರು ಇಲಾಖೆಯು ಕಣ್ಣು ಹಾಕಿದ್ದು, ತಡೆಗೋಡೆ ಕಾಮಗಾರಿ ನಡೆಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕಾನೆಲೆ ನಿರ್ಮಾಣದಿಂದ ತಾಲೂಕಿನ ಎಲ್ಲಾ ಕಡಲ ತೀರ ಸಾರ್ವಜನಿಕರ ಕೈತಪ್ಪಿದೆ. ಈ ಹಿಂದೆ ಕಡಲ ತೀರದಲ್ಲಿ ಅವೈಜ್ಞಾನಿಕವಾಗಿ ಬಂದರು ಅಭಿವೃದ್ದಿ ಪಡಿಸಲು ಮುಂದಾಗಿದ್ದರು. ಎಲ್ಲಾ ಸಾರ್ವಜನಿಕರು ಮೀನುಗಾರರು ಹೋರಾಟ ನಡೆಸಿ ಕಾಮಗಾರಿಯನ್ನ ನಿಲ್ಲಿಸಿದ್ದೆವು. ಆದರೆ ಈಗ ಮತ್ತೆ ಅಭಿವೃದ್ದಿ ಪಡಿಸಲು ಮುಂದಾಗಿದ್ದೇವೆ ಎನ್ನುವ ಬಂದರು ಇಲಾಖೆ ಅಧಿಕಾರಿಗಳ ಹೇಳಿಕೆಯು ಮೀನುಗಾರ‍್ಲಿ ಆತಂಕ ಮೂಡಿಸಿದೆ ಎಂದರು.

ಟ್ಯಾಗೋರ್ ಕಡಲ ತೀರವು ಕೇವಲ ಮೀನುಗಾರರಿಗೆ ಮಾತ್ರವಲ್ಲದೇ ಪ್ರವಾಸಿಗರಿಗೂ ನೆಚ್ಚಿನ ತಾಣವಾಗಿದೆ. ಚಂಡ ಮಾರುತ ಬಂದರೆ ನೆರೆಯ ರಾಜ್ಯದ ಬೋಟುಗಳು ಕೂಡ ಇಲ್ಲಿ ಲಂಗರು ಹಾಕುತ್ತವೆ. ಆದರೆ ಅಧಿಕಾರಿಗಳು ಅಂತಹ ಕಡಲ ತೀರವನ್ನು ಹಾಳು ಮಾಡಲು ಹೊರಟಿದ್ದಾರೆ. 125 ಕೋಟಿ ರೂ. ವೆಚ್ಚದಲ್ಲಿ ಕಲ್ಲುಗಳನ್ನು ಹಾಕಿ ಕಡಲ ತೀರವನ್ನ ಸಂರಕ್ಷಣೆ ಮಾಡುತ್ತೇವೆ ಎಂದಿರುವುದು ಮೂರ್ಖತನ. ಇಲ್ಲಿನ ಭಾವಟೆಕಟ್ಟೆಯ ಒಳಗೆ ಬಂದರು ಇಲಾಖೆ ವ್ಯಾಪ್ತಿಯಲ್ಲಿ ಏನಾದರು ಮಾಡಲಿ, ಆದರೆ ಕಡಲ ತೀರವನ್ನು ಮುಟ್ಟಬಾರದು. ಒಂದೊಮ್ಮೆ ಕಾರವಾರ ಕಡಲ ತೀರದಲ್ಲಿ ಕಮರಾರಿ ಮಾಡಲು ಮುಂದಾದರೆ ಕಾರವಾರದಜನತೆಯು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೌರೀಶ ಉಳ್ವೇಕರ, ಚೇತನ ಹರಿಕಂತ್ರ, ವಾಮನ ಹರಿಕಂತ್ರ, ಚಂದ್ರಕಾAತ ಹರಿಕಂತ್ರ, ವಿಠಲ ಹರಿಕಂತ್ರ, ರಾಜೇಶ ಮಾಜಾಳಿಕರ, ಪ್ರಕಾಶ ಹರಿಕಂತ್ರ, ಸೂರಜ ಕುರ್ಮಕರ, ವಿಠಲ ಭಾನಾವಾಳಿ ಹಾಗೂ ಇತರರು ಇದ್ದರು.

Edited By : PublicNext Desk
Kshetra Samachara

Kshetra Samachara

28/01/2026 06:42 pm

Cinque Terre

5.2 K

Cinque Terre

0

ಸಂಬಂಧಿತ ಸುದ್ದಿ