ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶಿರೂರಿನಲ್ಲಿ ವಾರದ ತರಕಾರಿ ಸಂತೆಗೆ ಚಾಲನೆ !

ನವಲಗುಂದ : ತಾಲೂಕಿನ ಶಿರೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಾರದ ತರಕಾರಿ ಸಂತೆಗೆ ಮೊರಬ ಉಪ ತಹಶೀಲ್ದಾರ್ ಎಂ.ಎಚ್‌.ಸದರಬಾಯಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮೊದಲಿಗೆ ಗ್ರಾಮಸ್ಥರು ಕಾಯಿಪಲ್ಯ ಸಂತೆ ತರಬೇಕಾದರೆ ಮತ್ತೊಂದು ಗ್ರಾಮ, ನಗರಗಳಿಗೆ ಹೋಗಬೇಕಾಗಿತ್ತು. ಆದರೆ ಗುರುಹಿರಿಯರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿಯ ಸದಸ್ಯರು, ಸಿಬ್ಬಂದಿ ಒಮ್ಮತ ನಿರ್ಧಾರ ಮಾಡಿ ಪ್ರಾರಂಭಿಸಿದ್ದು, ಇನ್ನು ಪ್ರತಿ ಮಂಗಳವಾರ ಶಿರೂರು ಗ್ರಾಮದಲ್ಲಿ ವಾರದ ತರಕಾರಿ ಸಂತೆ ಪ್ರಾರಂಭವಾಗಲಿದೆ ಎಂದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷ ಸಂಗನಗೌಡ ತೋಟದ, ಎಸ್‌ಡಿಎಂಸಿ ಅಧ್ಯಕ್ಷರಾದ ಶಂಕರಗೌಡ ರಾಯನಗೌಡ್ರ, ಶಂಕರಗೌಡ ಬಾಳನಗೌಡ್ರ, ಮಲ್ಲಪ್ಪ ಸಂಕದ, ಮಹಾದೇವಗೌಡ ಬಾಳನಗೌಡ್ರ, ಚಂದ್ರಗೌಡ ದಸ್ತಿ, ಮಲ್ಲಿಕಾರ್ಜುನಗೌಡ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Edited By : PublicNext Desk
Kshetra Samachara

Kshetra Samachara

29/01/2026 02:21 pm

Cinque Terre

4.54 K

Cinque Terre

0

ಸಂಬಂಧಿತ ಸುದ್ದಿ