ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪ ಪ್ರದೇಶದಲ್ಲಿ ಸಂಚಾರಿ ಪೊಲೀಸರ ನಿರ್ಲಕ್ಷ ಹಾಗೂ ದಂಡ ವಸೂಲಿಯಲ್ಲೇ ಹೆಚ್ಚು ತೊಡಗಿಸಿಕೊಂಡಿರುವ ಪರಿಣಾಮ, ಒನ್‌ವೇ ರಸ್ತೆಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಒನ್‌ವೇನಲ್ಲಿ ಚಲಿಸುತ್ತಿದ್ದ ಡಿಯೋ, ಎದುರಿನಿಂದ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.
ಒನ್‌ವೇ ರಸ್ತೆಯಲ್ಲೇ ಚಕ್ಕಡಿ, ಬೈಕ್ ಹಾಗೂ ಆಟೋಗಳ ನಿರಂತರ ಸಂಚಾರ ನಡೆಯುತ್ತಿದ್ದರೂ, ಇದನ್ನು ನಿಯಂತ್ರಿಸುವಲ್ಲಿ ಸಂಚಾರಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬರುತ್ತಿವೆ. ನಿಯಮ ಉಲ್ಲಂಘನೆ ತಡೆಯುವ ಬದಲು ಕೇವಲ ದಂಡ ವಸೂಲಿಯಲ್ಲೇ ಗಮನ ಹರಿಸಲಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಣಕಲ್ ಸಿದ್ದಪ್ಪಜ್ಜನಗುಡಿ ಮಾರ್ಗ ಹಾಗೂ ಬೈರಿದೇವರಕೊಪ್ಪದ ಶಿವಾನಂದ ಮಠದ ಸಮೀಪ ಪ್ರತಿದಿನವೂ ಸತತ ಅಪಘಾತಗಳು ಸಂಭವಿಸುತ್ತಿದ್ದು, ಇಂದಿನ ಘಟನೆ ಕೂಡ ಅದೇ ನಿರ್ಲಕ್ಷದ ಪರಿಣಾಮವೆನ್ನಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಘಟನೆ ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇನ್ನು ಮುಂದಾದರೂ ಸಂಚಾರಿ ಪೊಲೀಸರು ದಂಡ ವಸೂಲಿಯ ಜೊತೆಗೆ ಅಕ್ರಮ ಒನ್‌ವೇ ಸಂಚಾರಕ್ಕೆ ಬ್ರೇಕ್ ಹಾಕಿ ಇಂತಹ ಅಪಘಾತಗಳನ್ನು ತಡೆಯಬೇಕೆಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಬ್ಯೂರೋ ರಿಪೋರ್ಟ್ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/01/2026 08:48 am
LOADING...