ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಕ್ಕಿಯಂತೆ ಹಾರಿ ಹೋಗಿ ಗಿಡಕ್ಕೆ ಗುದ್ದಿದ ಬೈಕ್ - ಸವಾರ ಸ್ಥಳದಲ್ಲೇ ಸಾವು

ಧಾರವಾಡ: ಅತೀ ವೇಗದಲ್ಲಿ ಬಂದ ಬೈಕೊಂದು ರಸ್ತೆ ಬಿಟ್ಟು ಹಕ್ಕಿಯಂತೆ ಹಾರಿ ಹೋಗಿ ಗಿಡಕ್ಕೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ರಸ್ತೆಯಲ್ಲಿ ಸಂಭವಿಸಿದೆ.

ಗೋವನಕೊಪ್ಪದ ವಿನಾಯಕ ಸುಳ್ಳದ (23) ಎಂಬಾತನೇ ಈ ಅಪಘಾತದಲ್ಲಿ ಸಾವನ್ನಪ್ಪಿದ ಯುವಕ.

ಈತ ತನ್ನ ಅಜ್ಜಿಯ ಅಂತ್ಯ ಸಂಸ್ಕಾರಕ್ಕೆಂದು ಹೋಗಿ ಮರಳಿ ತನ್ನೂರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅಜ್ಜಿಯ ಅಂತ್ಯ ಸಂಸ್ಕಾರಕ್ಕೆಂದು ಹೋಗಿದ್ದವ ಇದೀಗ ತಾನೇ ಬಾರದ ಲೋಕಕ್ಕೆ ತೆರಳಿದ್ದಾನೆ.

ಅತೀ ವೇಗವಾಗಿ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2026 04:32 pm

Cinque Terre

48.78 K

Cinque Terre

0

ಸಂಬಂಧಿತ ಸುದ್ದಿ