ಚಿತ್ರದುರ್ಗ: 3 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದು, ಭ್ರಷ್ಟ ಬೆಸ್ಕಾಂ ಅಧಿಕಾರಿ ಬಲೆಗೆ ಬಿದ್ದಿದ್ದಾರೆ.
ಮಾಡದಕೆರೆ ಬೆಸ್ಕಾಂ ಸೆಕ್ಷನ್ ಆಫೀಸರ್, ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ. ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ 3 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬೆಸ್ಕಾಂ SO ಮಧು ಲಂಚ ಸ್ವೀಕರಿಸುವಾಗ ರೆಡ್ ಆ್ಯಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ರೈತ ರಾಮಚಂದ್ರಪ್ಪ ಅವರಿಂದ ಲಂಚ ಪಡೆಯುವ ವೇಳೆ ದಾಳಿ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ನಾಗಯ್ಯನಹಟ್ಟಿ ನಿವಾಸಿ ರಾಮಚಂದ್ರಪ್ಪ.ಲೋಕಾಯುಕ್ತ ಎಸ್.ಪಿ ವಾಸುದೇವ್, ಸಿಪಿಐ ಬಸವರಾಜ್ ಲಮಾಣಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
Kshetra Samachara
31/01/2026 07:16 pm
LOADING...