ಶಿವಮೊಗ್ಗ : ಸಿ.ಜೆ.ರಾಯ್ ಆತ್ಮಹತ್ಯೆ ಮುಚ್ಚಿಹಾಕಲು ಎಸ್ಐಟಿ ರಚನೆ ಮಾಡಲಾಗಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅನುಮಾನ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿ.ಜೆ.ರಾಯ್ ಆತ್ಮಹತ್ಯೆಯ ಬಗ್ಗೆ ಇನ್ನೂ ಕುಟುಂಬ ದೂರು ನೀಡಿಲ್ಲ. ಅಷ್ಟರಲ್ಲೇ ರಾಜ್ಯ ಸರ್ಕಾರ ತರಾತುರಿಯಲ್ಲಿ ರಾಯ್ ಅವರ ಆಪ್ತರಾದ ಜಾರ್ಜ್ ಅವರ ದೂರಿನ ಆಧಾರದ ಮೇರೆಗೆ ಎಸ್ಐಟಿ ರಚಿಸಿದೆ. ಈ ಹಿಂದೆಯೂ ಬೆಂಗಳೂರಿನಲ್ಲಿ ಆರ್ ಸಿಬಿ ವಿಜಯೋತ್ಸವದ ಕಾರ್ಯಕ್ರಮದ ಬಗ್ಗೆ ಎಸ್ಐಟಿ ರಚಿಸಿ ರಾಜ್ಯ ಸರ್ಕಾರ ನುಣಚಿಕೊಳ್ಳುವ ಯತ್ನ ನಡೆಸಿತ್ತು.
ಅದೇ ರೀತಿ ಇಲ್ಲಿಯೂ ಸಹ ಎಸ್ಐಟಿ ರಚನೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು. ಕಾಂಗ್ರೆಸ್ ನಾಯಕರು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ರಾಯ್ ಅವರ ಅಂತ್ಯಕ್ರಿಯೆ ಮುಗಿಸುವುದರೊಳಗೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸರ್ಕಾರ ತಪ್ಪುಗಳನ್ನ ಮುಚ್ಚಿ ಹಾಕಲು ಎಸ್ಐಟಿ ರಚಿಸಿದೆ. ಸ್ಪೆಷಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಅಲ್ಲ, ಅದು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಏಜೆನ್ಸಿ ಎಂದು ವ್ಯಂಗ್ಯವಾಡಿದರು.
PublicNext
01/02/2026 02:57 pm
LOADING...