ಬೆಳಗಾವಿ: ಇಂದಿನಿಂದ ನಡೆಯಲಿರುವ ಭರತ ಹುಣ್ಣಿಮೆ ಜಾತ್ರೆಗೆ ಯಲ್ಲಮ್ಮನಗುಡ್ಡ ಸಜ್ಜಾಗಿದೆ. ಜಾತ್ರೆಗೂ ಎರಡು ದಿನ ಮುಂಚೆಯಿಂದಲೇ ಅಮ್ಮನ ಸನ್ನಿಧಿಯತ್ತ ಭಕ್ತರ ದಂಡು ಹರಿದುಬರುತ್ತಿದೆ. ಇದು ರಾಜ್ಯದಲ್ಲಿ ನಡೆಯುವ ದೊಡ್ಡ ಜಾತ್ರೆ. ಯಲ್ಲಮ್ಮ ಮುತ್ತೈದೆಯಾಗುತ್ತಾಳೆ ಎಂಬ ನಂಬಿಕೆಯಿಂದ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಭಕ್ತರು ಇದರಲ್ಲಿ ಸೇರುತ್ತಾರೆ. ಗುಡ್ಡಕ್ಕೆ ಬರುವ ಪ್ರತಿ ಮಹಿಳೆಯು ಮುತ್ತೈದೆತನದ ಸಂಕೇತವಾದ ಹಸಿರು ಬಳೆ ಧರಿಸಿ ಸಂಭ್ರಮಿಸುತ್ತಾಳೆ. ಇದೊಂದೇ ಜಾತ್ರೆ ಅವಧಿಯಲ್ಲಿ ಗುಡ್ಡದ ಅಂಗಡಿಗಳಲ್ಲಿ ಕೋಟ್ಯಂತರ ರೂಪಾಯಿ ಬಳೆ ವಹಿವಾಟು ನಡೆಯುತ್ತದೆ. ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ತಮ್ಮ ಆರ್ಥಿಕ ಶಕ್ತಿಯನುಸಾರವಾಗಿ ದೇವಿಗೆ ವಿವಿಧ ಕಾಣಿಕೆ ಅರ್ಪಿಸಿ ಭಕ್ತಿ ಸಮರ್ಪಿಸುತ್ತಾರೆ.
PublicNext
01/02/2026 06:30 pm
LOADING...