ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪ ಸಿದ್ಧರಾಮೇಶ್ವರ ಸಂಸ್ಥೆ - ಗಣ್ಯ ಶಿಕ್ಷಕರಿಗೆ ಸನ್ಮಾನ

ಬೆಳಗಾವಿ : ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ನಾಗನೂರ ಶ್ರೀ ಪ್ರಭುದೇವ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ 2025-26 ನೆಯ ಸಾಲಿನ ವಾರ್ಷಿಕೋತ್ಸವ ಹಾಗೂ ಬಹುಮಾನ ವಿತರಣಾ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.‌

ರವಿವಾರ ಶಿವಬಸವ ನಗರದಲ್ಲಿ ಇರುವ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಆರ್ ಎನ್ ಶೆಟ್ಟಿ ಕಾಲೇಜಿನ ಆವರಣದಲ್ಲಿ ಈ ಕಾರ್ಯಕ್ರಮ ನೆರವೇರಿತು.‌ ಈ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಗಣ್ಯರು ಚಾಲನೆ ನೀಡಿದರು.‌

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಹಿರೇಮಠ ವಹಿಸಿದರು. ಮುಖ್ಯ ಅತಿಥಿಗಳಾಗಿ ಪೊಲೀಸ್ ಸರ್ಕಲ್ ಇನ್‌ ಸ್ಪೆಕ್ಟ‌ರ್ ಗುರುರಾಜ ಕಲ್ಯಾಣಶೆಟ್ಟಿ ಉಪಸ್ಥಿತರಿದ್ದರು.‌

ಈ ವೇಳೆ ಮಾತನಾಡಿದ ಗುರುರಾಜ ಕಲ್ಯಾಣಶೆಟ್ಟಿ ಅವರು, ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪ ಆಗಿದೆ.‌ ವಿದ್ಯಾರ್ಥಿಗಳು ನಿರಂತರವಾಗಿ ಸಕ್ರಿಯರಾಗಿ ಸದೃಢರಾಗಿರಬೇಕು. ಓದುವಲ್ಲಿ ಮುಂದೆ ಇರುವ ವಿದ್ಯಾರ್ಥಿಗಳು ಆಟದಲ್ಲೂ ಮುಂದೆ ಇರಬೇಕು.‌ ಹೆಚ್ಚು ಮೊಬೈಲ್ ಬಳಕೆ ಮಾಡಿ ದುಶ್ಚಟಗಳಿಗೆ ಬಲಿ ಆಗಬೇಡಿ, ಮೊಬೈಲ್ ಹೆಚ್ಚು ಬಳಕೆ ಬಿಟ್ಟು ಆಟ-ಪಾಠದ ಕಡೆ ಗಮನ ಕೊಡಿ. ಮೊಬೈಲ್ ಬಳಕೆಯಿಂದ ಗೊತ್ತಿಲ್ಲದೆ ಅಪರಾಧಗಳಲ್ಲಿ ಭಾಗಿ ಆಗುತ್ತೀರಿ. ನಮ್ಮ ಊರು, ನಮ್ಮ ಭಾಷೆ, ನಮ್ಮ ನಾಡು, ನಮ್ಮ ದೇಶದ ಬಗ್ಗೆ ಅಭಿಮಾನ ಇರಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎಸ್. ಪಿ ಹಿರೇಮಠ ಅವರು, ಮುಂದೆ ಉನ್ನತ ಅಭ್ಯಾಸ ಮಾಡುವಾಗ ಸಾಧನೆ ಮಾಡುವೆ ಎಂಬ ಉದ್ದೇಶ ಇರಬೇಕು, ಸಾಧನೆ ಮಾಡೇ ಮಾಡುವೆ ಎಂಬ ಗುರಿ ಜೀವನದಲ್ಲಿ ಅವಶ್ಯಕ.‌ ಮನಸ್ಸು ಮಾಡಿದರೆ ಏನು ಬೇಕಾದರು ಸಾಧಿಸಬಹುದು ಎಂದು ತಿಳಿಸಿದರು.

ಉತ್ತಮ ಶಿಕ್ಷಕರ ಸನ್ಮಾನ: ಗುಟಗುದ್ದಿಯ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಆರ್.ಎಸ್. ಪಂಗಣ್ಣವರ, ಬೆಳಗಾವಿ ನಗರದ ವಂಟಮೂರಿ ಕಾಲನಿಯ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಪಿ.ಜಿ. ಖೋತ, ರಾಮತೀರ್ಥ ನಗರದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಬಿ.ಎಸ್. ಮಿಲ್ಲಾನಟ್ಟಿ, ಜಿಎ ಪ್ರೌಢ ಶಾಲೆಯ ಶಿಕ್ಷಕ ಸಿ.ಎಂ. ಪಾಗದ, ಚಿಕ್ಕಬಾಗೇವಾಡಿಯ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಅರ್ಪಣಾ ಕಡಬಿ ಅವರಿಗೆ ಸನ್ಮಾನಿಸಲಾಯಿತು.‌

ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ನಾಗನೂರ ಶ್ರೀ ಪ್ರಭುದೇವ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕ್ರಿಡೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಥಮ ಪಿಯುಸಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.‌

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಭು ಶಿವನಾಯ್ಕರ,

ನಾಗನೂರ ಶ್ರೀ ಪ್ರಭುದೇವ ವಿಜ್ಞಾನ ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಸಪ್ಪಾ ಜೋಷಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.‌

Edited By : Manjunath H D
PublicNext

PublicNext

01/02/2026 10:03 pm

Cinque Terre

17.03 K

Cinque Terre

0

ಸಂಬಂಧಿತ ಸುದ್ದಿ