ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಶ್ರಮಕ್ಕೆ ಸಂದ ಗೌರವ - ಫೆ.2ಕ್ಕೆ ವಿಟಿಯು ಪದವಿ ಪ್ರದಾನ ಸಮಾರಂಭ!

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ 25ನೇ ವಾರ್ಷಿಕ ಘಟಿಕೋತ್ಸವದ 'ಭಾಗ-2' ನ್ನು ಫೆಬ್ರವರಿ 2 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆಯೋಜಿಸಿದೆ. ಈ ಮಹತ್ವದ ಪದವಿ ಪ್ರದಾನ ಸಮಾರಂಭವು ಬೆಳಗಾವಿಯ ಜ್ಞಾನ ಸಂಗಮ ಆವರಣದಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಲಿದೆ.

ಗಣ್ಯರ ಉಪಸ್ಥಿತಿ ಮತ್ತು ಪದವಿ ಪ್ರದಾನ

ಕರ್ನಾಟಕ ರಾಜ್ಯಪಾಲರು ಹಾಗೂ ವಿಟಿಯು ಕುಲಾಧಿಪತಿಗಳಾದ ಶ್ರೀ ಥಾವರಚಂದ್ ಗೆಹೋಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗೈದ ಪದವೀಧರರಿಗೆ ಪದವಿ ಪ್ರದಾನ ಮಾಡಿ ಗೌರವಿಸಲಾಗುವುದು.

ಆತ್ಮೀಯ ಸ್ವಾಗತ

ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಅಡಳಿತ ಮಂಡಳಿ ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಈ ಐತಿಹಾಸಿಕ ಹಾಗೂ ಗೌರವಪೂರ್ವಕ ಸಮಾರಂಭಕ್ಕೆ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2026 10:38 am

Cinque Terre

61.13 K

Cinque Terre

0

ಸಂಬಂಧಿತ ಸುದ್ದಿ