ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟಿಯು 25 ನೇ ಘಟಿಕೋತ್ಸವ : 25 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ

ಬೆಳಗಾವಿ: “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ 25 ನೇ ವಾರ್ಷಿಕ ಘಟಿಕೋತ್ಸವದಲ್ಲಿ( ಭಾಗ-2) 8,702 ವಿದ್ಯಾರ್ಥಿಗಳು ಪ್ರಮಾಣ ಪತ್ರ ವಿತರಿಸಲಾಯಿತು.ಸೋಮವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಪಿಜೆ ಅಬ್ದುಲ್ ಕಲಾಂ ಸಭಾ ಭವನದಲ್ಲಿ ಘಟಿಕೋತ್ಸವ ಸಮಾರಂಭ ನಡೆಯಿತು.

ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ವಹಿಸಿದ್ದರು, ಮುಖ್ಯ ಅತಿಥಿಯಾಗಿ ಫ್ಲಾಗ್ ಕರ್ನಾಟಕ ನೌಕಾ ನೆಲೆಯ ಆಫೀಸರ್ ಕಮಾಂಡಿಂಗ್ ರಿಯಲ್ ಅಡ್ಮಿರಲ್ ವಿಕ್ರಂ ಮೆನನ್ ಹಾಗೂ ಘನ ಉಪಸ್ಥಿತಿಯನ್ನು ಉನ್ನತ ಶಿಕ್ಷಣ ಸಚಿವರು ಹಾಗೂ ನಮ್ಮ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಎಂ. ಸಿ. ಸುಧಾಕರ್ ವಹಿಸಿದ್ದರು.

ಈ ಘಟಿಕೋತ್ಸವದಲ್ಲಿ 25 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು 96 ವಿದ್ಯಾರ್ಥಿಗಳಿಗೆ ವಿವಿಧ ರ್ಯಾಂಕ್ ನೀಡಲಾಯಿತು. ಎಂಬಿಎ, ಎಂಸಿಎ, ಎಂ. ಟೆಕ್, ಪಿ. ಎಚ್. ಡಿ ಸೇರಿದಂತೆ ಪ್ರವೇಶ ಪಡೆದಿದ್ದ 9,540 ವಿದ್ಯಾರ್ಥಿಗಳ ಪೈಕಿ, 8,702 ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆಯಲು ಅರ್ಹರಾಗಿದ್ದು ಉತ್ತೀರ್ಣ ಪ್ರಮಾಣ ಶೇ.91. 21 ಇದೆ. ಎಂದಿನಂತೆ ಹುಡುಗಿಯರು ಮೇಲುಗೈ ಸಾಧಿಸಿದ್ದಾರೆ. ಶೇಕಡಾ 94.40 ಹುಡುಗಿಯರು ಮತ್ತು ಶೇಕಡಾ 87.98 ಹುಡುಗರು ಸೇರಿದ್ದಾರೆ.

ಘಟಿಕೋತ್ಸವದಲ್ಲಿ ಎಂಬಿಎ -4,928, ಎಂಸಿಎ -2,960, ಎಂ.ಟೆಕ್ - 718, ಎಂ. ಆರ್ಕ್- 59, ಎಂ.ಪ್ಲಾನ್ -21, ಎಂ. ಎಸ್ಸಿ -16 ಸೇರಿದಂತೆ ಒಟ್ಟಾರೆ -8,702 ವಿದ್ಯಾರ್ಥಿಗಳು ಪದವಿ ವಿತರಿಸಲಾಯಿತು.

ಚಿನ್ನದ ಪದವೀಧರರುಶಿವಮೊಗ್ಗದ ಜವಾಹರ ಲಾಲ್ ನೆಹರು ಕಾಲೇಜ್ ಆಫ್ ಎಂಜಿನಿಯರಿಂಗ್ ಜೆ. ಪಾರ್ವತಿ ಸಾಲೇರಾ 4 ಚಿನ್ನದ ಪದಕ, ಬೆಂಗಳೂರಿನ ಆರ್. ಎನ್. ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಚ್. ಸಿ. ಕಾವ್ಯ 3 ಚಿನ್ನದ ಪದಕ, ದಾವಣಗೆರೆ ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಬಿ. ಎಸ್. ಸಂಚಿತಾ 3 ಚಿನ್ನದ ಪದಕ, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿ. ಯೋಗೇಶ್ ಗೌಡ, ಬೆಂಗಳೂರಿನ ಜಿ. ಪಿ. ನಗರದ ಆಕ್ಸ್ಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್ ಸಿ. ರೇವಂತ ಕುಮಾರ್, ಬಳ್ಳಾರಿಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಬಿ. ರಾಹುಲ್ ಡೇವಿಡ್ ತಲಾ ಎರಡು ಚಿನ್ನದ ಪದಕ ವಿತರಿಸಲಾಯಿತು.

ವಿಟಿಯು ಕುಲಸಚಿವ (ಮೌಲ್ಯಮಾಪನ) ಪ್ರೊ. ಯು. ಜೆ. ಉಜ್ವಲ್ ಮತ್ತು ಕುಲಸಚಿವ ಪ್ರೊ. ಪ್ರಸಾದ ಬಿ. ರಾಂಪೂರೆ ಇದ್ದರು.

Edited By : Shivu K
PublicNext

PublicNext

02/02/2026 05:51 pm

Cinque Terre

12.63 K

Cinque Terre

0

ಸಂಬಂಧಿತ ಸುದ್ದಿ