ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೌಢ ಶಾಲೆ ಹಾಗೂ ಪಿ ಯು ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಸಮಾರಂಭ

ಘಟಪ್ರಭಾ: ಶನಿವಾರ ಘಟಪ್ರಭಾ ಪಟ್ಟಣದ ಜಗದ್ಗುರು ಶ್ರೀ ದುರದುಂಡೇಶ್ವರ ಮಠ ಟ್ರಸ್ಟ್ ಅರಭಾವಿಮಠ ಇದರ ಪ್ರೌಢ ಶಾಲೆ ಹಾಗೂ ಪಿ ಯು ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ನಡೆಸಲಾಯಿತು.

ಈ ವೇಳೆ ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಶ್ರೀ ಡಾ.‌ಅಲ್ಲಮಪ್ರಭು ಮಹಾಸ್ವಾಮೀಜಿ ಮಾತನಾಡಿ, ಶ್ರೀ ದುರದುಂಡೇಶ್ವರ ಶ್ರೀಗಳ ಕನಸನ್ನು ಇಂದು ಶ್ರೀ ಗುರುಬಸವ ಮಹಾಸ್ವಾಮಿಗಳು ಕೋಟ್ಯಂತರ ರೂ. ಗಳನ್ನು ಖರ್ಚು ಮಾಡಿ ಸುಸಜ್ಜಿತ ಕಟ್ಟಡ ಮಾಡಿ ಈ ಭಾಗದ ವಿದ್ಯಾರ್ಥಿಗಳ ಕನಸಿನ ವ್ಯಾಸಂಗಕ್ಕೆ ಅನುವು ಮಾಡಿದ್ದಾರೆ. ಸ್ಕಿಲ್ ಇಂಡಿಯಾ ತನ್ನ ಜ್ಞಾನದಿಂದ ಇಂದು ನಾವು ಏನೂ ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

ಸಾನಿಧ್ಯ ವಹಿಸಿ ಅರಭಾವಿ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಗುರುಬಸವಲಿಂಗ ಮಹಾಸ್ವಾಮೀಜಿ ಮಾತನಾಡಿ, ಮೊದಲಿನ ಕಾಲದಲ್ಲಿ ಶಿಕ್ಷಣದ ಕೊರತೆ ಇತ್ತು, ಆದರೆ ಅವರಲ್ಲಿ ಸಂಸ್ಕಾರ ಇತ್ತು, ಆದರೆ ಈಗ ಉತ್ತಮ ಮಟ್ಟದ ಶಿಕ್ಷಣ ವ್ಯವಸ್ಥೆ ಇದೆ ಆದರೆ ಸಂಸ್ಕಾರ ಇಲ್ಲ. ಅಣ್ಣ ತಮ್ಮಂದಿರು ಪಾಲು ತೆಗೆದುಕೊಳ್ಳುತ್ತಾರೆ ಆದರೆ ನಾವು ಕಲಿತ ಶಿಕ್ಷಣದಲ್ಲಿ ಪಾಲು ಕೊಡಲು ಆಗದು, ಶಿಕ್ಷಣದಿಂದ ಎಲ್ಲವೂ ಸಾಧ್ಯ ಇಲ್ಲ, ವಿವೇಕದಿಂದ ಎಲ್ಲವೂ ಇದೆ. ಒಬ್ಬ ವ್ಯಕ್ತಿ 9 ನೇ ತರಗತಿ ಫೇಲ್ ಆಗಿ ಉಪ್ಪಿನಕಾಯಿ ಉದ್ಯೋಗ ಮಾಡಿ ಸಾವಿರ ರೂ ಗಳಿಸಿ, ಫೇಲಾದ ವಿದ್ಯಾರ್ಥಿಗಳನ್ನು ಕರೆಸಿಕೊಂಡು ವ್ಯಾಪಾರ ಮಾಡಿ, ಲಕ್ಷಾಂತರ ಗಳಿಸಿ, ಒಂದು ಮಾಧ್ಯಮ ಖರೀದಿ ಮಾಡಿ ಇಂದು ಜೀ ಟಿವಿ ಮಾಡಿ, ಫಿಲಂ ಸಿಟಿ ಮಾಡಿ ದೇಶಕ್ಕೆ ಮಾದರಿ ಆಗಿ ಅನೇಕರಿಗೆ ಉದ್ಯೋಗ ಕೊಟ್ಟವರು ರಾಮೋಜಿರಾವ್ ಅವರ ಆದರ್ಶ ಕಲಿಯಬೇಕು ಎಂದರು.

400 ವರ್ಷಗಳಿಂದ ಅರಭಾವಿ ಮಠ ಅನೇಕ ಸಾಮಾಜಿಕ, ಶೈಕ್ಷಣಿಕ, ದಾಸೋಹ ಕೆಲಸ ಮಾಡಿ ಮುನ್ನಡೆದಿದೆ, ರಾಜ ಮಲಸರ್ಜ, ಸಾಂಗ್ಲಿ ಪೇಶ್ವೆಗಳು ಮಠದ ಭಕ್ತರು, ಮಠವನ್ನು ಅನೇಕ ಪವಾಡ ಮಹಾನ್ ಶ್ರೀಗಳು ನಡೆಸಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನಿಗೆ ಆಶ್ರಯ ನೀಡಿದ ಮಠ ಅಂದು ಇಂದು ದಾಸೋಹ ನಿರಂತರವಾಗಿ ನಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಚಿಕ್ಕೋಡಿ ಪಿ ಯು ಉಪನಿರ್ದೇಶಕರಾದ ಪಿ.ಐ. ಭಂಡಾರಿ ಮತ್ತಿತರರು ಇದ್ದರು.

Edited By : Nirmala Aralikatti
Kshetra Samachara

Kshetra Samachara

01/02/2026 09:41 am

Cinque Terre

6.08 K

Cinque Terre

0

ಸಂಬಂಧಿತ ಸುದ್ದಿ