ಮುಲ್ಕಿ: ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಶ್ರೀ ಹರಿಹರ ಕ್ಷೇತ್ರದಲ್ಲಿ, ಶ್ರೀ ವಿಷ್ಣುಮೂರ್ತಿದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
ವಿವಿಧ ಧಾರ್ಮಿಕ ವಿಧಿ ವಿಧಾನಗಳು
ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ಅವರ ನೇತೃತ್ವದಲ್ಲಿ, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನೆರವೇರಿತು. ರಾತ್ರಿ ಶ್ರೀ ದೇವರ ಉತ್ಸವ ಬಲಿ, ಕೆರೆ ದೀಪೋತ್ಸವ, ಮಹಾಪೂಜೆ ಹಾಗೂ ಭೂತ ಬಲಿ ಜರುಗಿದವು. ಸೋಮವಾರ ರಾತ್ರಿ ಶ್ರೀ ದೇವರ ಶಯನೋತ್ಸವ ನಡೆಯಲಿದೆ.
ಗಣ್ಯರ ಉಪಸ್ಥಿತಿ
ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್. ಅರವಿಂದ ಪೂಂಜಾ, ಉದ್ಯಮಿ ಆದಿತ್ಯ ಪೂಂಜಾ, ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್, ಸತೀಶ್ ಭಂಡಾರಿ, ವೈ.ಎನ್. ಸಾಲ್ಯಾನ್, ವಿಷ್ಣುಮೂರ್ತಿ, ಶರತ್ ಕಾರ್ನಾಡ್, ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವಿ ಕುಮಾರ್, ಶಶೀಂದ್ರ ಸಾಲ್ಯಾನ್, ರಾಘವೇಂದ್ರ ರಾವ್, ನೂತನ್ ಶೆಟ್ಟಿ, ಜೀವನ್ ಶೆಟ್ಟಿ, ಕೀರ್ತನ್ ಶೆಟ್ಟಿ, ಕೃಷ್ಣ ಶೆಟ್ಟಿ, ಪ್ರವೀಣ್ ಕೋಟ್ಯಾನ್ ಧರ್ಮಸ್ಥಾನ, ಕಾಲಿಯಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Kshetra Samachara
01/02/2026 09:45 pm
LOADING...