ಮುಲ್ಕಿ: ತೋಕೂರು ಸಮೀಪದ ಮದ್ದೇರಿ ದೇವಸ್ಥಾನದಲ್ಲಿ ವಾರ್ಷಿಕ ಬಂಡಿ ನೇಮೋತ್ಸವವು ವಿಜೃಂಭಣೆಯಿಂದ ಜರುಗಿತು. ಶನಿವಾರ ಬೆಳಿಗ್ಗೆ ಚಪ್ಪರ ಆರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ತೋಕೂರು ಗುತ್ತು ಮತ್ತು ಮೂಡುಮನೆಯಿಂದ ದೈವಗಳ ಭಂಡಾರ ಆಗಮನದ ನಂತರ ಉಳ್ಳಾಯ ದೈವದ ನೇಮೋತ್ಸವವು ನೆರವೇರಿತು.
ರಾತ್ರಿ 7 ಗಂಟೆಯಿಂದ ಮೈಸಂದಾಯ ದೈವದ ನೇಮೋತ್ಸವ, ಕಾಂತೇರಿ ಜುಮಾದಿ ಬಂಟ ಹಾಗೂ ಸಾರಾಳ ಜುಮಾದಿ ಬಂಟ ದೈವಗಳ ನೇಮೋತ್ಸವಗಳು ವಿಜೃಂಭಣೆಯಿಂದ ಸಂಪನ್ನಗೊಂಡವು. ಇದೇ ವೇಳೆ, ಸಾರ್ವಜನಿಕ ಅನ್ನ ಸಂತರ್ಪಣೆ ಕೂಡ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
PublicNext
01/02/2026 10:41 pm
LOADING...